ಸಿಎಂರನ್ನೂ ಬೆಚ್ಚಿಬೀಳಿಸಿದ ದರ್ಶನ್ ಗ್ಯಾಂಗ್ ಕ್ರೌರ್ಯ ! ಡಿ ಗ್ಯಾಂಗ್ ಲೀಡರ್ ಮತ್ತೆ ಕಸ್ಟಡಿಗೆ ಏಕೆ..?

ಪವಿತ್ರಾ ಜೈಲಿಗೆ..! ದರ್ಶನ್ ಇನ್ನೇರಡು ದಿನ ಕಸ್ಟಡಿಗೆ..!
ಇವನ ಜೊತೆ ಮೂವರು ಆರೋಪಿಗಳು ಪೊಲೀಸ್ ಕಸ್ಟಡಿಗೆ
ಎ2 ದರ್ಶನ್‌ನನ್ನು ಪೊಲೀಸ್ ಮತ್ತೆ ಕಸ್ಟಡಿಗೆ ಪಡೆದಿದ್ದೇಕೆ..? 

First Published Jun 21, 2024, 5:18 PM IST | Last Updated Jun 21, 2024, 5:19 PM IST

ದರ್ಶನ್ (Darshan)ಜೊತೆ ಇನ್ನು ನಾಲ್ವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇನ್ನು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ(Renukaswamy murder case) ಎ1 ಆರೋಪಿಯಾಗಿರುವ ಪವಿತ್ರಾ ಗೌಡ(pavitra gowda) ಜೊತೆಗೆ ಉಳಿದ ಹನ್ನೊಂದು ಆರೋಪಿಗಳನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ. ಸಿಎಂ ಸಿದ್ದರಾಮಯ್ಯ(Siddaramaiah) ಆ ಭಯಾನಕ ವಿಡಿಯೋ ಕುರಿತು  ಮಾತ್ನಾಡಿದ್ದಾರೆಂದು ಹೇಳಲಾಗುತ್ತಿದೆ. ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯನವರು ರೇಣುಕಾಸ್ವಾಮಿ ಕೊಲೆ ಕೇಸ್ ಕುರಿತು ಮಾತ್ನಾಡಿದ್ದಾರಂತೆ. ಅದು ತುಂಬಾ ಭಯಾಕನವಾದ ಕ್ರೌರ್ಯವಾಗಿದೆ. ಅದರಂತ ಕ್ರೌರ್ಯವನ್ನು ಈ ಹಿಂದೆ ನೋಡಿಯೇ ಇಲ್ಲ. ಹೀಗಾಗಿ ಈ ಪ್ರಕರಣ ತುಂಬಾ ಸೂಕ್ಷ್ಮ ಮತ್ತು ಹೈಪ್ರೊಫೈಲ್ ಪ್ರಕರಣವಾಗಿದೆ. ಇದರ ಕುರಿತು ಯಾರೊಬ್ಬರೂ ಮಾತ್ನಾಡಬೇಡಿ. ಎಲ್ಲೂ ಸಹ ಪರ ಅಥವಾ ವಿರೋಧ ಯಾವುದೇ ಚರ್ಚೆಯನ್ನೂ ಮಾಡಬೇಡಿ. ಕಾನೂನು ತನ್ನ ಕೆಲಸ ತಾನು ಮಾಡಲಿದೆ ಎಂಬ ಎಚ್ಚರಿಕೆಯನ್ನು ಸಿಎಂ ಸಿದ್ದು ಕೊಟ್ಟಿದ್ದಾರೆಂದು ಹೇಳಲಾಗುತ್ತಿದೆ. 

ಇದನ್ನೂ ವೀಕ್ಷಿಸಿ:  ಅನುಮಾನಕ್ಕೆಲ್ಲಾ ಉತ್ತರ ನೀಡುತ್ತಾ ವಿಧಿವಿಜ್ಞಾನ ಪರೀಕ್ಷೆ? ಡಿ ಗ್ಯಾಂಗ್ ವಿರುದ್ಧ ಡಿಜಿಟಲ್ ಸಾಕ್ಷಿಗಳು!