ಅನುಮಾನಕ್ಕೆಲ್ಲಾ ಉತ್ತರ ನೀಡುತ್ತಾ ವಿಧಿವಿಜ್ಞಾನ ಪರೀಕ್ಷೆ? ಡಿ ಗ್ಯಾಂಗ್ ವಿರುದ್ಧ ಡಿಜಿಟಲ್ ಸಾಕ್ಷಿಗಳು!


ಬರ್ಬರ ಹತ್ಯೆಯ ಗುಟ್ಟು ಹೇಳುತ್ತಾ ವೈಜ್ಞಾನಿಕ ಪರೀಕ್ಷೆ..?
ಎಫ್ಎಸ್ಎಲ್‌ ವರದಿಗಾಗಿ ಕಾಯ್ತಿರೋದೇಕೆ ಪೊಲೀಸರು.?
ಇಲ್ಲಿ ತನಕ ಆಗಿದ್ದೇನು? ಇನ್ನುಮುಂದೆ ಆಗಲಿರೋದೇನು..?

First Published Jun 21, 2024, 4:45 PM IST | Last Updated Jun 21, 2024, 4:45 PM IST

ಡೆವಿಲ್ ಗ್ಯಾಂಗ್ ವಿರುದ್ಧ ಸಾಕ್ಷಿ ಹೇಳೋಕೆ ಸಿದ್ಧವಾಗ್ತಾ ಇದೆಯಂತೆ  ಡಿಎನ್ಎ ಪರೀಕ್ಷೆಯ(DNA test) ಫಲಿತಾಂಶ. ಆರೋಪಿಗಳು 17 ಮಂದಿ. ಆದ್ರೆ ಡಿಎನ್ಎ ಪರೀಕ್ಷೆ ನಡೆದದ್ದು ಆ  9 ಜನರದ್ದು ಮಾತ್ರ. ರೇಣುಕಾಸ್ವಾಮಿ ಅನ್ನೋ ಬಡಕಲು ದೇಹದ ಆಸಾಮಿಯ ಕೊಲೆ. ಅದು ಬರೀ ಕೊಲೆ ಅಲ್ಲ, ಭೀಕರ ಹತ್ಯೆ. ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ತಪ್ಪಿಗೆ, ರೇಣುಕಾಸ್ವಾಮಿಗೆ(Renukaswamy Murder case) ಚಿತ್ರಹಿಂಸೆ ಕೊಟ್ಟು  ಕೊಂದಿತ್ತು ಡೆವಿಲ್(Darshan) ಗ್ಯಾಂಗ್. ಮೈತುಂಬಾ ಸುಟ್ಟ ಗಾಯಗಳು, ಪುಡಿಪುಡಿಯಾದ ಎಲುಬುಗಳು, ಕಿತ್ತುಬಂದ ದವಡೆ, ಇದೆಲ್ಲವೂ ಕೂಡ ರೇಣುಕಾಸ್ವಾಮಿಯ ಅಂತಿಮ ಕ್ಷಣಗಳ ಭೀಕರತೆಯ ಪ್ರತಿಬಿಂಬವಾಗಿದ್ವು. ಸಾಯೋ ಮುಂಚೆ, ನಾನೂ ದರ್ಶನ್ ಅಭಿಮಾನಿನೇ ಅಂತ ಬಾಯ್ ಬಾಯ್ ಬಡ್ಕೊಂಡ್ರೂ, ಅಲ್ಲಿದ್ದ ಪುಡಾಂಗ್‌ಗಳಿಗೆ ಅದು ಕೇಳಿಸಲೇ ಇಲ್ಲ. ರೇಣುಕಾಸ್ವಾಮಿ ಕಳಿಸಬಾರದ ಮೆಸೇಜ್ ಕಳಿಸದೇ ಇದ್ದಿದ್ರೆ, ತನ್ನ ಗರ್ಭಿಣಿ ಹೆಂಡತಿಯ ಕಡೆಗೇ ಗಮನ ಕೊಟ್ಟಿದ್ದಿದ್ರೆ, ಇಷ್ಟೆಲ್ಲಾ ದಾರುಣ ಯಾಕಾದ್ರೂ ಆಗ್ತಿತ್ತು? ಇದು ಹಲವರ ಪ್ರಶ್ನೆ. ಆದ್ರೆ ಅವನು ಮಾಡಿದ ತಪ್ಪಿಗೆ, ಡಿ ಗ್ಯಾಂಗ್ ಅತಿಭೀಕರ ಶಿಕ್ಷೇನೇ ಕೊಟ್ಟುಬಿಟ್ಟಿದೆ. ಚಿತ್ರದುರ್ಗದಿಂದ ಕಿಡ್ನಾಪ್ ಮಾಡ್ಕೊಂಡ್ ಬಂದು, ಬೆಂಗಳೂರಿನ ಸುಮ್ಮನಹಳ್ಳಿಯಲ್ಲಿ ಡೆಡ್ ಬಾಡಿ ಬಿಸಾಡೋ ತನಕ, ಮಾಡಿದ ಪ್ರತಿ ಕೆಲಸವೂ ಘೋರವಾಗಿದೆ.

ಇದನ್ನೂ ವೀಕ್ಷಿಸಿ:  ಡಿ ಗ್ಯಾಂಗ್ ವಿರುದ್ಧ 10 ಕಠಿಣ ಸೆಕ್ಷನ್‌ಗಳು...! ಕೋರ್ಟ್‌ನಲ್ಲಿ ಹೇಗಿತ್ತು ವಾದ-ಪ್ರತಿವಾದ..!