Asianet Suvarna News Asianet Suvarna News

ಕೋವಿಡ್ ಆಸ್ಪತ್ರೆಯಲ್ಲಿ ನರ್ಸ್‌ಗಳೇ ಇಲ್ಲ..!

ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತರ ಪಾಡು ಹೇಳ ತೀರದಾಗಿದೆ. 90 ವರ್ಷದ ಕೊರೋನಾ ಸೋಂಕಿತ ವೃದ್ದನಿಗೆ ಪುತ್ರನೇ ಶುಶ್ರೂಷೆ ಕೆಲಸ ಮಾಡುತ್ತಿದ್ದಾರೆ. ಹಾಗಾದರೇ ಆಸ್ಪತ್ರೆಯಲ್ಲಿ ನರ್ಸ್‌ಗಳೇ ಇಲ್ವಾ ಎನ್ನು ಅನುಮಾನ ಶುರುವಾಗಿದೆ.
 

ಯಾದಗಿರಿ(ಜು.30): ರಾಜ್ಯದಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ, ಮತ್ತೊಂದೆಡೆ ಆಸ್ಪತ್ರೆಗಳ ಅವ್ಯವಸ್ಥೆ ಬಟಾಬಯಲಾಗುತ್ತಿದೆ. ರೋಗಿಗಳಿಗೆ ಬೆಡ್‌ ಇಲ್ಲ, ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಕೇಳುತ್ತಿದ್ದೆವು. ಇದೀಗ ಕೋವಿಡ್ ಆಸ್ಪತ್ರೆಗಳಲ್ಲಿ ನರ್ಸ್‌ಗಳೇ ಇಲ್ಲ ಎನ್ನುವ ಆಘಾತಕಾರಿ ವಿಚಾರ ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ.

ಹೌದು, ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತರ ಪಾಡು ಹೇಳ ತೀರದಾಗಿದೆ. 90 ವರ್ಷದ ಕೊರೋನಾ ಸೋಂಕಿತ ವೃದ್ದನಿಗೆ ಪುತ್ರನೇ ಶುಶ್ರೂಷೆ ಕೆಲಸ ಮಾಡುತ್ತಿದ್ದಾರೆ. ಹಾಗಾದರೇ ಆಸ್ಪತ್ರೆಯಲ್ಲಿ ನರ್ಸ್‌ಗಳೇ ಇಲ್ವಾ ಎನ್ನು ಅನುಮಾನ ಶುರುವಾಗಿದೆ.

ಗಂಗಾವತಿ: ಸೈಕಲ್ ಏರಿ ಕೊರೋನಾ ಜಾಗೃತಿಗೆ ಮುಂದಾದ ವೃದ್ಧ ದಂಪತಿ

ಪಿಪಿಇ ಕಿಟ್ ಇಲ್ಲದೇ ವೃದ್ದನಿಗೆ ಮಗ ಆರೈಕೆ ಮಾಡುತ್ತಿದ್ದಾರೆ. ಇನ್ನು ಪರಿಸ್ಥಿತಿ ಹೇಗಿದೆ ಎಂದರೆ ವೃದ್ದನಿಗೆ ಸೂಕ್ತ ಚಿಕಿತ್ಸೆಯೂ ಸಿಗುತ್ತಿಲ್ಲ, ಬೆಡ್ ಕೂಡಾ ಚೇಂಜ್ ಮಾಡಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.'