ಪಾಂಡವಪುರ ಸಂಭ್ರಮ: ಸಾಧಕ ರೈತರಿಗೆ ಸನ್ಮಾನ.. ಹುತಾತ್ಮ ಅನ್ನದಾತರಿಗೆ ನಮನ

ರೈತ ಸಾಧಕರಿಗೆ ಸನ್ಮಾನ, ಸ್ಥಳೀಯರ ಕಲಾಪ್ರದರ್ಶನಕ್ಕೆ‌ ಶಿಳ್ಳೆ, ಚಪ್ಪಾಳೆಗಳು ಕೇಳಿಬಂದವು. ವಿಶಿಷ್ಟ ಝೇಂಬೆ ವಾದನ, ಸಿರಿಯಲ್ ಸ್ಟಾರ್‌‌‌ಗಳ ಆಗಮನ ಪಾಂಡವಪುರ ಜನತೆಯ ಖುಷಿಯನ್ನ ದುಪ್ಪಟ್ಟಾಗಿಸಿತ್ತು.‌ ಹಾಗಾದ್ರೆ "ಪಾಂಡವಪುರ ಸಂಭ್ರಮದ‌‌" ಎರಡನೇ ದಿನ ಹೇಗಿತ್ತು ಬನ್ನಿ ನೋಡೋಣ.

First Published Dec 24, 2023, 11:08 AM IST | Last Updated Dec 24, 2023, 11:08 AM IST

ಸಕ್ಕರೆ ನಾಡು ಮಂಡ್ಯದ ಪಾಂಡವಪುರದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಆಯೋಜಿಸಿರುವ "ಪಾಂಡವಪುರ ಸಂಭ್ರಮ"(Pandavapura Celebration) ಎರಡನೇ ದಿನವೂ ಯಶಸ್ವಿಯಾಗಿ ನಡೆಯಿತು. ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಆಯೋಜಿಸಿರುವ "ಪಾಂಡವಪುರ ಸಂಭ್ರಮ" ಕಾರ್ಯಕ್ರಮಕ್ಕೆ ಎರಡನೇ ದಿನವೂ ಅದ್ಬುತ ರೆಸ್ಪಾನ್ಸ್ ಸಿಕ್ಕಿತು. ರಾಷ್ಟ್ರೀಯ ರೈತ ದಿನಾಚರಣೆ(National Farmer Day) ಹಿನ್ನೆಲೆ ಹುತಾತ್ಮ ರೈತನಾಯಕರಿಗೆ ಪುಷ್ಪನಮನ ಸಲ್ಲಿಸಿದ ಮಾಜಿಸಚಿವ ಸಿಎಸ್ ಪುಟ್ಟರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಈ ವೇಳೆ ಕೃಷಿಯಲ್ಲಿ ಸಾಧನೆಗೈದ ರೈತ ಸಾಧಕರನ್ನ ಗುರುತಿಸಿ ಗೌರವಿಸಲಾಯಿತು. ಬಳಿಕ ಆರಂಭವಾದ ವೇದಿಕೆ ಕಾರ್ಯಕ್ರಮದಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಜನರನ್ನ ಮನರಂಜಿಸಿದ್ರು. ಶಾಲಾ ವಿದ್ಯಾರ್ಥಿನಿಯರ ಕಂಸಾಳೆ, ಯೋಗ ಪ್ರದರ್ಶನ, ನೃತ್ಯ ಜನರ ಮನಸೆಳೆಯಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಬೃಂದಾವನ ಸಿರಿಯಲ್ ಖ್ಯಾತಿಯ ನಟಿ ಅಮೂಲ್ಯ ವೇದಿಕೆಯ ಮೆರುಗು ಹೆಚ್ಚಿಸಿದ್ರು. ನಂತರ ಆರಂಭವಾದ ಝೇಂಬೆ ವಾದನ ಜನರನ್ನು ಕುಣಿಯುವಂತೆ ಮಾಡಿತ್ತು. ಜನರ ಮಧ್ಯೆಯೇ ಕಾರ್ಯಕ್ರಮ ನೋಡುತ್ತಾ‌ ಕುಳಿತ ಮಾಜಿ ಸಚಿವ ಸಿಎಸ್ ಪುಟ್ಟರಾಜು, ಸ್ಥಳೀಯ ಕಲಾವಿದರ ಟ್ಯಾಲೆಂಟ್‌ ಕಂಡು ಸಂಭ್ರಮಿಸಿದರು.

ಇದನ್ನೂ ವೀಕ್ಷಿಸಿ:  Weekly-Horoscope: ಇಂದು ಹನುಮದ್ವ್ರತ ಇದ್ದು, ಇದನ್ನು ಹೇಗೆ ಆಚರಿಸಬೇಕು, ಇದರ ಫಲಗಳೇನು ?