Weekly-Horoscope: ಇಂದು ಹನುಮದ್ವ್ರತ ಇದ್ದು, ಇದನ್ನು ಹೇಗೆ ಆಚರಿಸಬೇಕು, ಇದರ ಫಲಗಳೇನು ?

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

Share this Video
  • FB
  • Linkdin
  • Whatsapp

ವಾರದ ವಿಶೇಷವೇನು ಎಂದು ನೋಡೋದಾದ್ರೆ, ಡಿಸೆಂಬರ್ 24 ಅಂದರೇ ಭಾನುವಾರ ಹನುಮದ್ವ್ರತ ಇದೆ. ಡಿಸೆಂಬರ್ 26 ಮಂಗಳವಾರ ದತ್ತ ಜಯಂತಿ ಇದೆ. ಡಿಸೆಂಬರ್ 27 ರಂದು ಬುಧವಾರ ಕುಜ ಧನಸ್ಸು ಸಂಕ್ರಮಣವಿರಲಿದೆ. ಮೇಷ ರಾಶಿಯವರಿಗೆ ವಾರದ ಆದಿಯಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಕತ್ತಿನ ಮೇಲ್ಭಾಗದಲ್ಲಿ ತೊಂದರೆ ಆಗಲಿದೆ. ಆಹಾರ ಸಮೃದ್ಧಿ ಕೃಷಿಕರಿಗೆ ಅನುಕೂಲ. ಕುಟುಂಬ ಸೌಖ್ಯ. ವೃತ್ತಿಯಲ್ಲಿ ಅನುಕೂಲವಿರಲಿದೆ. ವಾರ ಮಧ್ಯದಲ್ಲಿ ಸಹೋದರರಲ್ಲಿ ಸಹಕಾರ, ಕಣ್ಣಿನ ಬಾಧೆಗಳು, ಕಾಲಿಗೆ ತೊಂದರೆ, ವೃತ್ತಿಯಲ್ಲಿ ಅನುಕೂಲ, ಸ್ನೇಹಿತರಿಂದ ಸಹಕಾರ ದೊರೆಯಲಿದೆ. ವಾರಾಂತ್ಯದಲ್ಲಿ ಸ್ನೇಹಿತರಿಂದ ಸಹಕಾರ ಬಂಧುಗಳಲ್ಲಿ ಪ್ರೀತಿ, ಕೃಷಿಕರಿಗೆ ಅನುಕೂಲ, ವೃತ್ತಿಯಲ್ಲಿ ಕಿರಿಕಿರಿ, ವಿಘ್ನಗಳು ಸಂಭವಿಸಬಹುದು. ಪರಿಹಾರಕ್ಕೆ ಈಶ್ವರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  ಫಾರ್ಮ್ ಹೌಸ್‌ನಲ್ಲಿ ಮಧ್ಯರಾತ್ರಿ ಪೂಜೆ ಮಾಡಿಸಿದ ನಟ ಪವನ್‌ ಕಲ್ಯಾಣ್‌: ಕಾರಣ ಏನ್‌ ಗೊತ್ತಾ ?

Related Video