ರೈತರು ಉಳುಮೆ ಮಾಡುವ ಜಮೀನು ಸರ್ಕಾರದ ಹೆಸರಿಗೆ: ಸೌಕರ್ಯ ಸಿಗದೇ ಅನ್ನದಾತರು ಕಂಗಾಲು..!
ಭೀಕರ ಬರದ ಮಧ್ಯೆ ತತ್ತರಿಸಿರುವ ರೈತರಿಗೆ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ತುಂಡು ಭೂಮಿಯನ್ನು ನಂಬಿದ್ದ ರೈತರ ಜಾಗ ಇದೀಗ ಸರ್ಕಾರದ ಜಾಗ ಎಂದು ನಮೂದಾಗಿದೆ.
ಶತಮಾನಗಳಿಂದ ಜೀವನಕ್ಕಾಗಿ ತುಂಡು ಭೂಮಿಯನ್ನು ನಂಬಿದ್ದ ಅನ್ನದಾತರಿಗೆ(farmers) ಇದೀಗ ಆತಂಕ ಎದುರಾಗಿದೆ. ಗದಗ(Gadag) ಜಿಲ್ಲೆ ನರಗುಂದ ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದ 538 ಎಕರೆ ಜಮೀನನ್ನ ರೈತರು ಉಳುಮೆ ಮಾಡ್ತಿದ್ರು.ಈ ಜಮೀನನ್ನೇ ನಂಬಿದ್ದ ರೈತರಿಗೆ ಭೂಮಿಯೂ ಕೈ ತಪ್ಪಿ ಹೋಗುವ ಆತಂಕ ಶುರುವಾಗಿದೆ. ಈ ಜಮೀನಿನ ದಾಖಲೆಗಳಲ್ಲಿ(Land Record) ಹರಿದೀಕ್ಷಿತ್ ಇನಾಮದಾರ್ ಹಾಗೂ ಇತರ ರೈತರ ಹೆಸರು ದಾಖಲಾಗಿತ್ತು. ಆದ್ರೇ ಇದೀಗ ರೈತರ ಹೆಸರಿನ ಬದಲಾಗಿ ಸರ್ಕಾರಿ ಜಾಗ ಅಂತಾ ನಮೂದಾಗಿದೆ.. ಈ ಭೂಮಿಯನ್ನೇ ನಂಬಿದ ರೈತರಿಗೆ ದಿಕ್ಕು ತೋಚದಂತಾಗಿದೆ. ಇನಾಮು ಜಮೀನಿನ ಹಕ್ಕು ಪತ್ರ ನೀಡುವಂತೆ ಸರ್ಕಾರಕ್ಕೆ ರೈತರು ಪರಿ ಪರಿಯಾಗಿ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.. 2021 ರೈತರ ಹೋರಾಟಕ್ಕೆ ಮಣಿದ ಸರ್ಕಾರ ಸರ್ವೆ ಮಾಡಲು ಸೂಚನೆ ನೀಡಿತ್ತು.. ಆದ್ರೀಗ ಪಹಣಿಯಿಂದ ರೈತ್ರ ಹೆಸರಿನ ಬದಲಾಗಿ, ಸರ್ಕಾರದ ಹೆಸರು ಬಂದಿದೆ.. ಇದ್ರಿಂದಾಗಿ ರೈತ ವಿಮೆ, ಬೆಳೆ ನಷ್ಟ ಪರಿಹಾರ ಸೇರಿ ರೈತರಿಗೆ ಸಿಗಬೇಕಾದ ಸೌಲಭ್ಯ ಸಿಗ್ತಿಲ್ಲ..ಆದಷ್ಟು ಬೇಗ ಈ ಸಮಸ್ಯೆಯನ್ನ ಸರ್ಕಾರ ಬಗೆಹರಿಸಬೇಕೆಂದು ರೈತರು ಆಗ್ರಹಿಸ್ತಿದ್ದಾರೆ. ಈ ಸಂಬಂಧ ಪಹಣಿಯಲ್ಲಿನ ಹೆಸರನ್ನು ಬದಲಾಯಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಭರವಸೆ ನೀಡಿದ್ದಾರೆ. ಜೀವನೋಪಾಯಕ್ಕೆ ಅಂತಿದ್ದ ತುಂಡು ಜಮೀನು ಈಗ ಸರ್ಕಾರದ ಹೆಸರಿಗೆ ಬದಲಾವಣೆಯಾಗಿದೆ.. ಬರ ಬಿದ್ದಿದ್ದು ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯ ಸಿಗುವ ಭರವಸೆಯೂ ರೈತ್ರಿಗೆ ಉಳಿದಿಲ್ಲ.
ಇದನ್ನೂ ವೀಕ್ಷಿಸಿ: IMA ಕೇಸ್‌ನಲ್ಲಿ ಹಣ ಕಳೆದುಕೊಂಡಿದ್ದವರಿಗೆ ಗುಡ್ ನ್ಯೂಸ್: 55 ಸಾವಿರ ಹೂಡಿಕೆದಾರರಿಗೆ 68 ಕೋಟಿ ಹಂಚಿಕೆ..!