ಮದುವೆ ಗಿಫ್ಟ್‌ವರೆಗೂ ಬಂತು ಈರುಳ್ಳಿ: ವಿಡಿಯೋ ವೈರಲ್!

ಸಾಮಾಜಿಕ ಜಾಲತಾಣದಲ್ಲಿ ಮದುವೆಗೆ ನೀಡಿದ ಈರುಳ್ಳಿ ಗಿಫ್ಟ್ ವಿಡಿಯೋ ವೈರಲ್| ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿನ ಮದುವೆಯಲ್ಲಿ ಸ್ನೇಹಿತರು ನವದಂಪತಿಗೆ ನೀಡಿದ ಈರುಳ್ಳಿ ಬಾಕ್ಸ್ ಗಿಫ್ಟ್‌|ಬಾಕ್ಸ್ ತೆರೆದ ನವದಂಪತಿಗೆ ಶಾಕ್|

Share this Video
  • FB
  • Linkdin
  • Whatsapp

ಬಾಗಲಕೋಟೆ(ಡಿ.07): ಇದೀಗ ಎಲ್ಲಿ ನೋಡಿದ್ರೂ ಬರೀ ಈರುಳ್ಳಿಯದ್ದೇ ಮಾತಾಗಿದೆ. ಏಕೆಂದರೆ ಈರುಳ್ಳಿ ದರ ಹೆಚ್ಚಾಗಿರುವ ಕಾರಣ ಒಂದು ಕೆಜಿ ಈರುಳ್ಳಿ ತಗೋಬೇಕಾದ್ರೂ ಕಣ್ಣಲ್ಲಿ ನೀರು ಬರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಥದ್ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈರುಳ್ಳಿಯ ಕೆಲವೊಂದು ವಿಡಿಯೋಗಳು ಭಾರೀ ವೈರಲ್ ಆಗುತ್ತಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗ ಸಾಮಾಜಿಕ ಜಾಲತಾಣದಲ್ಲಿ ಮದುವೆಗೆ ನೀಡಿದ ಈರುಳ್ಳಿ ಗಿಫ್ಟ್ ವಿಡಿಯೋ ವೈರಲ್ ಆಗುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿನ ಮದುವೆಯಲ್ಲಿ ಸ್ನೇಹಿತರು ನವದಂಪತಿಗೆ ಈರುಳ್ಳಿಯುಳ್ಳ ಬಾಕ್ಸ್‌ವೊಂದನ್ನು ಗಿಫ್ಟ್ ಕೊಟ್ಟಿದ್ದಾರೆ. ಈ ಬಾಕ್ಸ್ ತೆರೆದ ನವದಂಪತಿಗೆ ಶಾಕ್ ಜೊತೆಗೆ ಆಶ್ಚರ್ಯ ಕೂಡ ಆಗಿದೆ. 

Related Video