ಕಾಲಿಗೆ ಗಾಯ, ಅನಾಥ ವೃದ್ಧೆಯ ನರಳಾಟ: ಸಹಾಯಕ್ಕೆ ಬಾರದ ಸಾರ್ವಜನಿಕರು

ಅನಾಥ ವೃದ್ಧೆಯ ನರಳಾಟ| ರಾಯಚೂರಿನಲ್ಲಿ ನಡೆದ ಘಟನೆ| ನೋವಿನಿಂದ ಅಳುತ್ತಾ ಅಂಗಡಿ ಮುಂದೆ ಕುಳಿತಿದ್ದ ಅನಾಥ ವೃದ್ಧೆ| ಆಟೋ ಮೂಲಕ ಆಸ್ಪತ್ರೆಯಲ್ಲಿ ದಾಖಲಿಸಿದ ಬಜಾರ್‌ ಪಿಎಸ್‌ಐ ಮಂಜುನಾಥ್‌|
 

Share this Video
  • FB
  • Linkdin
  • Whatsapp

ರಾಯಚೂರು(ಜು.12): ಅನಾಥ ವೃದ್ಧೆಯೊಬ್ಬಳು ಕಾಲಿಗೆ ಗಾಯವಾಗಿದ್ದರಿಂದ ನೋವಿನಿಂದ ನರಳಾಡುತ್ತಿದ್ದ ಘಟನೆ ನಗರದಲ್ಲಿ ನಡೆದಿದೆ. ನಗರದ ಬಟ್ಟೆ ಅಂಗಡಿ ಮುಂದೆ ವೃದ್ಧೆ ಕಾಲಿಗೆ ಗಾಯವಾಗಿದ್ದರಿಂದ ನಿನ್ನೆ ರಾತ್ರಿಯಿಂದ ನೋವಿನಿಂದ ನರಳಾಡಿದ್ದಾಳೆ. 

ಬೆಂಗಳೂರಿನಿಂದ ವಿಜಯಪುರಕ್ಕೆ ಬಂದ ದಂಪತಿ; ಬಸ್‌ ಇಲ್ಲದೇ ಪರದಾಟ

ವೃದ್ಧೆಯ ಕಾಲಿಗೆ ಗಂಭೀರವಾದ ಗಾಯವಾಗಿದ್ದರಿಂದ ನೋವಿನಿಂದ ಅಳುತ್ತಾ ಅಂಗಡಿ ಮುಂದೆ ಕುಳಿತಿದ್ದಳು. ಕೊರೋನಾ ಭಯದಿಂದ ಯಾರೂ ಕೂಡ ಸಹಾಯ ಬಂದಿಲ್ಲ. ಹೀಗಾಗಿ ನಗರದ ಸದರ್‌ ಬಜಾರ್‌ ಪಿಎಸ್‌ಐ ಮಂಜುನಾಥ್‌ ಅವರು ಆಟೋ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. 

Related Video