Asianet Suvarna News

ಮೈಮರೆತ್ರಾ ಧಾರವಾಡ ಮಂದಿ? ಮಾರುಕಟ್ಟೆಯಲ್ಲಿ ಜನವೋ ಜನ..!

Jun 9, 2021, 12:45 PM IST

ಧಾರವಾಡ(ಜೂ.09): ಕೊರೋನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಲೇ ಜನರು ಬಿಂದಾಸ್‌ ಆಗಿ ರೋಡಿಗಿಳಿದಿದ್ದಾರೆ. ಹೌದು, ನಗರದ ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನರು ಫುಲ್ ಬ್ಯುಸಿಯಾಗಿದ್ದಾರೆ. ಇವರಿಗೆ ಕೊರೋನಾ ವೈರಸ್‌ ಭಯ ಇಲ್ವೇನೋ ಎಂಬಂತೆ ವರ್ತಿಸುತ್ತಿದ್ದಾರೆ. ಪ್ರತಿ ದಿನ ನಾಲ್ಕು ಗಂಟೆ ಅಗತ್ಯ ವಸ್ತುಗಳ ಖರೀದಿಗೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. 

ಅನ್‌ಲಾಕ್‌ಗೆ ಸಿಂಗಾಪುರ್ ಮಾದರಿ ಅನುಸರಿಸಲು ತಜ್ಞರ ಸಲಹೆ

ಆದ್ರೆ, ನಾಳೆ ಯಾವುದೇ ವಸ್ತುಗಳು ಸಿಗುತ್ತೋ ಇಲ್ವೋ ಎಂಬಂತೆ ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಮಾರ್ಕೆಟ್‌ನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ, ಮಾಸ್ಕ್‌ ಧರಿಸದೇ ಕೋವಿಡ್‌ ನಿಯಮಗಳನ್ನ ಗಾಳಿಯಲ್ಲಿ ತೂರಿ ಆರಾಮವಾಗಿ ಜನರು ಓಡಾಡುತ್ತಿದ್ದಾರೆ.