ಮಳೆ ಇಲ್ಲದೇ ಒಣಗಿ ಹೋದ ಮಕ್ಕೆಜೋಳ ಬೆಳೆ! ಲೋನ್ ಕಟ್ಟುವಂತೆ ರೈತರಿಗೆ ಬ್ಯಾಂಕ್ ನೋಟಿಸ್
ಮಳೆ ಇಲ್ಲದೇ ದಾವಣಗೆರೆಯಲ್ಲಿ ಆತಂಕದ ಪರಿಸ್ಥಿತಿ ಎದುರಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದು ಅನ್ನದಾತರ ಸಂಕಷ್ಟಕ್ಕೆ ದೂಡಿದೆ. ಇತ್ತ ರೈತರಿಗೆ ಬ್ಯಾಂಕ್‌ನಿಂದ ಲೋನ್ ಕಟ್ಟಬೇಕು ಅಂತಾ ನೋಟಿಸ್ ಬಂದಿದೆ. ಇದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಒಂದು ಕಡೆ ಮಳೆ ಇಲ್ಲದೇ ಒಣಗಿ ಹೋದ ಮೆಕ್ಕೆಜೋಳ ಬೆಳೆ. ಯಾವಾಗ ವರುಣ ಕೃಪೆತೋರಿಸ್ತಾನೆ ಅಂತಾ ಕಾದು ಕುಳಿತ ರೈತ. ಇತ್ತ ಬೆಳೆ(Crops) ಇಲ್ಲದಿದ್ರೂ ಲೋನ್ ಕಟ್ಟುವಂತೆ ಬ್ಯಾಂಕ್‌ನಿಂದ ನೋಟಿಸ್(Bank Notice) ಬಂದಿದ್ದು ದಾವಣಗೆರೆಯಲ್ಲಿ(Davanagere) ಅನ್ನದಾತರ ಸಂಕಷ್ಟಕ್ಕೆ ದೂಡಿದೆ. ದಾವಣಗೆರೆಯಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಸೆಪ್ಪೆಂಬರ್ ಬಂದ್ರೂ ನಿರೀಕ್ಷೆ ಪ್ರಮಾಣದಲ್ಲಿ ಮಳೆ ಇಲ್ಲದೇ ರೈತರನ್ನು ಆತಂಕಕ್ಕೆ ದೂಡಿದೆ. ಬಿತ್ತನೆಯಾಗಿರುವ ಸಂಪೂರ್ಣ ಬೆಳೆ, ಮಳೆ(Rain) ಇಲ್ಲದೇ ನೆಲಕಚ್ಚಿದ್ದು, ರೈತರು ಹಾಕಿದ ಬಂಡವಾಳ ಮಣ್ಣು ಪಾಲಾಗಿದೆ. ಇಷ್ಟೆಲ್ಲ ಕಂಗೆಟ್ಟ ರೈತರಿಗೆ ಸಾಲ ಪಾವತಿಸುವಂತೆ ಬ್ಯಾಂಕ್ ನೋಟಿಸ್ ಕೊಟ್ಟಿದೆ. ಒಂದು ಲಕ್ಷ ಲೋನ್ ಪಡೆದ ರೈತರಿಗೆ ಬಡ್ಡಿ, ಚಕ್ರಬಡ್ಡಿ ಹೆಚ್ಚಾಗಿದೆ ಅಂತಾ ನೋಟಿಸ್ ಮೇಲೆ ನೋಟಿಸ್ ನೀಡುತ್ತಿದ್ದು, ದಾವಣಗೆರೆಯ ಚಟ್ಟೋಬನಹಳ್ಳಿ ಗ್ರಾಮದಲ್ಲಿ ರೈತರ ಬಾಳಲ್ಲಿ ಗಾಯದ ಮೇಲೆ ಬರೆ ಎಳೆದಿದೆ.
ಇದನ್ನೂ ವೀಕ್ಷಿಸಿ: ಅಪ್ರಾಪ್ತೆ ಹಿಂದೆ ಬಿದ್ದಿದ್ದ ಪಾಗಲ್ ಪ್ರೇಮಿ: ಮಗಳ ತಂಟೆಗೆ ಬರಬೇಡ ಎಂದಿದ್ದಕ್ಕೆ ಮರ್ಡರ್ !