Asianet Suvarna News Asianet Suvarna News

Dharwad: 14 ಜೀವಗಳನ್ನ ಬಲಿ ಪಡೆದ ಅಪಘಾತಕ್ಕೆ ಒಂದು ವರ್ಷ: ಕಿಲ್ಲರ್ ರಸ್ತೆಯಿಂದ ಮುಕ್ತಿ ಯಾವಾಗ?

*   ಹುಬ್ಬಳ್ಳಿ-ಧಾರವಾಡ ಬೈಪಾಸ್‌ನ ಇಟ್ಟಿಗಟ್ಟಿ ಗ್ರಾಮದ ಬಳಿ ನಡೆದಿದ್ದ ಅವಘಡ
*   ದುರ್ಘಟನೆ ಬಳಿಕ ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರಿಂದ ಸಾಕಷ್ಟು ಒತ್ತಡ
*   ಒಂದು ವರ್ಷವಾದರೂ ಟೆಂಡರ್ ಪ್ರಕ್ರಿಯೆ ಬಿಟ್ಟರೆ ಮತ್ತೇನೂ ನಡೆದೇ ಇಲ್ಲ 
 

ಧಾರವಾಡ(ಜ.20): ಕಳೆದ ವರ್ಷ ಧಾರವಾಡ ಜಿಲ್ಲೆಯ ಇತಿಹಾಸದಲ್ಲಿಯೇ ಅತಿ ದೊಡ್ಡ ಅಪಘಾತ ನಡೆದು ಹೋಗಿತ್ತು. ಹುಬ್ಬಳ್ಳಿ-ಧಾರವಾಡ ಬೈಪಾಸ್‌ನ ಇಟ್ಟಿಗಟ್ಟಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾಗಿ 4 ರಲ್ಲಿ ಟೆಂಪೋ ಟ್ರಾವೆಲ್‌ಗೆ ಟಿಪ್ಪರ್‌ವೊಂದು ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ದಾವಣಗೆರೆ ಮೂಲದ 13 ಮಹಿಳೆಯರು ಹಾಗೂ ಚಾಲಕ ಅಸುನೀಗಿದ್ದರು. ಆ ಘಟನೆ ನಡೆದು ಇಂದಿಗೆ ಬರೋಬ್ಬರಿ ಒಂದು ವರ್ಷ. ಘಟನೆ ನಡೆದು ಒಂದು ವರ್ಷವಾದರೂ ಇಂದಿಗೂ ಆ ಅಪಘಾತ ಯಾರ ಮನಸ್ಸಿನಿಂದಲೂ ಮರೆಯಾಗಿಲ್ಲ. 

ಮೊದಲಿನಿಂದಲೂ ಬೈಪಾಸ್ ರಸ್ತೆಯಲ್ಲಿ ಇಂತಹ ದುರ್ಘಟನೆಗಳು ನಡೆದರೂ ಅತೀ ಹೆಚ್ಚಿನ ಸಾವು-ನೋವು ಕಂಡ ಘಟನೆ ಇದಾಗಿದ್ದರಿಂದ ಈ ರಸ್ತೆಯ ಅಗಲೀಕರಣಕ್ಕೆ ಸಾಕಷ್ಟು ಒತ್ತಡ ಕೇಳಿ ಬಂದಿತ್ತು. ಆದರೆ ಅದಾಗಿ ಒಂದು ವರ್ಷವಾದರೂ ಇದುವರೆಗೂ ಟೆಂಡರ್ ಪ್ರಕ್ರಿಯೆ ಬಿಟ್ಟರೆ ಮತ್ತೇನೂ ನಡೆದೇ ಇಲ್ಲ ಅನ್ನೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Belagavi: ಕೋವಿಡ್‌ ರೂಲ್ಸ್‌ ಬ್ರೇಕ್‌: ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ FIR

ಈ ಘಟನೆ ಬರೀ ರಾಜ್ಯವಲ್ಲದೇ ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಅಪಘಾತದಲ್ಲಿ ಅಸುನೀಗಿದವರ ಆತ್ಮಕ್ಕೆ ಶಾಂತಿ ಕೋರಿದ್ದರು. ಈ ಘಟನೆ ನಡೆದ ಬಳಿಕ ಈ ರಸ್ತೆಯನ್ನು ಅಗಲೀಕರಣ ಮಾಡಬೇಕು ಅನ್ನೋ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿತ್ತು. ಈ ರಸ್ತೆಯನ್ನು ನಂದಿ ಇನ್ಫ್ರಾಸ್ಟಕ್ಟರ್ ಕಂಪನಿ ನಿರ್ಮಿಸಿ, ನಿರ್ವಹಣೆ ಮಾಡುತ್ತಿದೆ. 2024 ರ ಮೇ ತಿಂಗಳವರೆಗೆ ಅವರೇ ನಿರ್ವಹಣೆ ಮಾಡಬೇಕಿದೆ. ಆದರೆ ಆ ಕಂಪನಿಗೆ ಅಗಲೀಕರಣ ಮಾಡಲು ಇಷ್ಟವಿಲ್ಲದಿದ್ದಕ್ಕೆ ಈ ಸಮಸ್ಯೆ ಇಂದಿಗೂ ಮುಂದುವರೆಯುತ್ತಲೇ ಇದೆ. 

ಇನ್ನು ಈ ಒಂದು ವರ್ಷದ ಅವಧಿಯಲ್ಲಿ ಮತ್ತೆ ಅನೇಕ ಅಪಘಾತಗಳು ಆಗಿದ್ದು, ಹತ್ತಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ರಸ್ತೆ ಅಗಲೀಕರಣಕ್ಕೆ ಮನಸ್ಸು ಮಾಡಿದ್ದು, ಆರು ಪಥಗಳನ್ನಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಿವೆ. ಆದರೆ, ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಟೆಂಡರ್ ಪ್ರಕ್ರಿಯೆ ಇದೀಗ ಜಾರಿಯಲ್ಲಿದ್ದು, ಇವೆಲ್ಲಾ ಮುಗಿಯೋದಕ್ಕೆ ಎಷ್ಟು ದಿನಗಳು ಬೇಕೋ ಏನೋ ಅನ್ನೋದು ಜನರ ಪ್ರಶ್ನೆಯಾಗಿದೆ.
 

Video Top Stories