Belagavi: ಕೋವಿಡ್‌ ರೂಲ್ಸ್‌ ಬ್ರೇಕ್‌: ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ FIR

*   ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ ಕೇಸ್‌ 
*   ಕರ್ಫ್ಯೂ ಮಧ್ಯೆಯೂ ಕಾರ್ಯಕ್ರಮವನ್ನ ಆಯೋಜಿಸಿದ್ದ ಶಾಸಕ
*   ಸಂಭಾಜಿ ಪಟ್ಟಾಭಿಷೇಕ ದಿನಾಚರಣೆ ಮಾಡಿದ್ದ ಅನಿಲ್‌ ಬೆನಕೆ 
 

First Published Jan 20, 2022, 12:38 PM IST | Last Updated Jan 20, 2022, 12:46 PM IST

ಬೆಳಗಾವಿ(ಜ.20): ಕೊರೋನಾ ನಿಯಮಗಳನ್ನ ಬ್ರೇಕ್‌ ಮಾಡಿ ವೀಕೆಂಡ್‌ ಕರ್ಫ್ಯೂ ಮಧ್ಯೆಯೂ ಕಾರ್ಯಕ್ರಮವನ್ನ ಆಯೋಜಿಸಿದ್ದ ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ ಕೇಸ್‌ ದಾಖಲಾಗಿದೆ. ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಎಫ್‌ಐಆರ್‌ ದಾಖಲಾಗಿದೆ. ಬೆಳಗಾವಿಯ ಕ್ಯಾಂಪ್‌ ಠಾಣೆಯಲ್ಲಿ ಕೇಸ್‌ ದಾಖಲಿಸಲಾಗಿದೆ. ಜ.16 ರಂದು ನಗರದ ಸಂಭಾಜಿ ವೃತ್ತದಲ್ಲಿ ಕಾರ್ಯಕ್ರಮವನ್ನ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೋವಿಡ್‌ ನಿಯಮಗಳನ್ನ ಗಾಳಿ ತೂರಲಾಗಿತ್ತು. ಅನಿಲ್‌ ಬೆನಕೆ ಸಂಭಾಜಿ ಪಟ್ಟಾಭಿಷೇಕ ದಿನಾಚರಣೆಯನ್ನ ಮಾಡಿದ್ದರು. 

Contaminated Milk: ಇದೇನು ಹಾಲೋ, ಹಾಲಾಹಲವೋ?

Video Top Stories