ಬಸವಣ್ಣನ ಕರ್ಮಭೂಮಿಗೇ ಕತ್ತಲು: ಬಸವಕಲ್ಯಾಣದಲ್ಲಿ ಜನರ ನರಕಯಾತನೆ..!
ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸದ ಜನಪ್ರತಿನಿಧಿಗಳು| ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದ ಸ್ಟ್ರೀಟ್‌ಲೈಟ್‌ಗಳಿಗಿಲ್ಲ ವಿದ್ಯುತ್| ರಾಜಕೀಯ ನಾಯಕರ ಕಟೌಟ್ ಹಾಕಲು ಬಳಕೆಯಾಗುತ್ತಿರುವ ವಿದ್ಯುತ್ ಕಂಬಗಳು|
ಬೀದರ್(ಫೆ.10): ಜಿಲ್ಲೆಯ ಬಸವಕಲ್ಯಾಣ ನಗರದ ಮೇಲೆ ರಾಜ್ಯ ರಾಜಕೀಯ ನಾಯಕರ ಕಣ್ಣು ಬಿದ್ದಿದೆ. ಹೌದು, ಶಾಸಕ ಪಿ. ನಾರಾಯಣರಾವ್ ಅಕಾಲಿಕ ನಿಧನದಿಂದ ತೆರವಾದ ಬಸವಕಲ್ಯಾಣ ಕ್ಷೇತ್ರದ ಗದ್ದುಗೆಗಾಗಿ ಭರ್ಜರಿ ಫೈಟ್ ನಡೆಯುತ್ತಿದೆ. ಆದರೆ, ಸಾರ್ವಜನಿಕರ ಸಂಕಷ್ಟ ಮಾತ್ರ ಯಾವೊಬ್ಬ ಅಧಿಕಾರಿಗೆ ಆಗಲೀ, ಜನಪ್ರನಿಧಿಗಳಾಗಲೀ ಕಾಣುತ್ತಿಲ್ಲ. ಬಿದ್ದರೂ ಕೂಡ ಕ್ಯಾರೇ ಎನ್ನುತ್ತಿಲ್ಲ.
ಬಿಗ್ 3 ಇಂಪ್ಯಾಕ್ಟ್: 10 ತಿಂಗಳ ಸಮಸ್ಯೆಗೆ 10 ದಿನದಲ್ಲೇ ಸಿಕ್ತು ಮುಕ್ತಿ..!
ಬಸವಕಲ್ಯಾಣ ನಗರದ ರಾತ್ರಿಯಾದರೆ ಸಾಕು ಜನರು ಕತ್ತಲಲ್ಲಿ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿರುವ ಸ್ಟ್ರೀಟ್‌ಲೈಟ್ ಕಂಬಗಳಲ್ಲಿ ಕರೆಂಟ್ ಇಲ್ಲದೆ, ರಾಜಕೀಯ ನಾಯಕರ ಕಟೌಟ್ ಹಾಕಲು ಬಳಕೆಯಾಗುತ್ತಿದೆ. ಇದರಿಂದ ಇಲ್ಲಿನ ಜನರು ನರಕಯಾತನೆಯನ್ನ ಅನುಭವಿಸುತ್ತಿದ್ದಾರೆ.