
ಬಿಗ್ 3 ಇಂಪ್ಯಾಕ್ಟ್: 10 ತಿಂಗಳ ಸಮಸ್ಯೆಗೆ 10 ದಿನದಲ್ಲೇ ಸಿಕ್ತು ಮುಕ್ತಿ..!
ಹೈಮಾಸ್ಟ್ ಲೈಟ್ ರಿಪೇರಿ ಮಾಡಿಸುವುದಕ್ಕೆ ಪಟ್ಟಣ ಪಂಚಾಯತ್ ಅಧಿಕಾರಿಗಳ ಮೀನಾಮೇಷ| ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣ| ಹೊಸ ಲೈಟ್ ಅಳವಡಿಸಲು ಸಿದ್ಧತೆ|
ಕೊಡಗು(ಫೆ.10): ಸಾರ್ವಜನಿಕರಿಗೆ ಉಪಯೋಗವಾಗಲಿ ಅಂತ ಜಿಲ್ಲೆಯ ವಿರಾಜಪೇಟೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಹೈಮಾಸ್ಟ್ ಲೈಟ್ ಅಳವಡಿಸಲಾಗಿತ್ತು. ಆದರೆ, ಲಕ್ಷಾಂತರ ರೂ. ಖರ್ಚು ಮಾಡಿದ್ರೂ ಕೂಡ ಕಳೆದ ಕೆಲವು ದಿನಗಳಿಂದ ರಿಪೇರಿ ಮಾಡಿಸುವುದಕ್ಕೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಪಂಚಮಸಾಲಿಗೆ ಮೀಸಲಾತಿ: ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಮಹತ್ವದ ಸಭೆ
ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಬಿಗ್ 3 ಕಾರ್ಯಕ್ರಮದಲ್ಲಿ ವರದಿ ಪ್ರಸಾರವಾಗಿತ್ತು. ವರದಿ ಪ್ರಸಾರವಾಗಿದ್ದೇ ತಡ 10 ತಿಂಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆ ಕೇವಲ 10 ದಿನದಲ್ಲೇ ಮುಕ್ತಿ ಸಿಕ್ಕಿದೆ. ಇದೀಗ ಈ ಜಾಗದಲ್ಲಿ ಹೊಸ ಲೈಟ್ ಅಳವಡಿಸಲು ಸಿದ್ಧತೆ ನಡೆಯುತ್ತಿದೆ.