Asianet Suvarna News Asianet Suvarna News

Corona in Karnataka : ಡಬಲ್ ಡೋಸ್  ಪಡೆಯದವರಿಗೆ ಚಿಕಿತ್ಸೆ ಇಲ್ಲ, ಸೌಲಭ್ಯ ಕಟ್?

* ಒಮ್ರಿಕಾನ್ ಆತಂಕದ ನಡುವೆ ಸರ್ಕಾರದ ಸಭೆ
* ಲಸಿಕೆ ಬೇಡ ಎನ್ನುವವರಿಗೆ ಶಾಕ್ ಕೊಡುತ್ತಾ ಸರ್ಕಾರ
* ಸೋಂಕು ತಡೆಗೆ ಕಠಿಣ ರೂಲ್ಸ್ ಅನಿವಾರ್ಯ
* ದಿನ ಮುಗಿದರೂ ಸೆಕೆಂಡ್ ಡೋಸ್ ತೆಗೆದುಕೊಳ್ಳದವರಿಗೆ ಏನೇನ್ನಬೇಕು

ಬೆಂಗಳೂರು(ನ. 30)  ಒಮ್ರಿಕಾನ್ (Omicron) ನಿಯಂತ್ರಣಕ್ಕೆ ಸಂಬಂಧಿಸಿ  ರಾಜ್ಯ ಸರ್ಕಾರ(Karnataka Govt) ಮಹತ್ವದ ಸಭೆ ನಡೆಸಿದೆ.  ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಮಹತ್ವದ ಸಲಹೆಗಳನ್ನು ನೀಡಿದೆ. ಮುಖ್ಯಮಂತ್ರಿಗಳ (Basavaraj Bommai) ಜತೆ ವಿವರವಾಗಿ ಚರ್ಚೆ ಮಾಡಿ ಗೈಡ್ ಲೈನ್ಸ್  ಬಿಡುಗಡೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಸುಧಾಕರ್(Dr. K Sudhakar) ತಿಳಿಸಿದ್ದಾರೆ.

ಶಿವಮೊಗ್ಗ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೊರೋನಾ

ಎರಡು ಡೋಸ್ ಲಸಿಕೆ (Vaccine)ಪಡೆದುಕೊಳ್ಳದವರಿಗೆ  ಸರ್ಕಾರಿ ಸೌಲಭ್ಯ ಕಟ್ ಮಾಡಬೇಕು ಎಂಬ ಸಲಹೆ ಬಂದಿದೆ ಎನ್ನಲಾಗಿದೆ.  ಒಮ್ರಿಕಾನ್ ಬಗ್ಗೆಯೂ  ಮುಂದಿನ ಹಂತದಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು.