Asianet Suvarna News Asianet Suvarna News

ಕರಾವಳಿಯಂತೆ ಬಳ್ಳಾರಿಯಲ್ಲೂ ಪಿಎಫ್‌ಐ ಆ್ಯಕ್ಟಿವ್: ಶಸ್ತ್ರಾಸ್ತ್ರ ತರಬೇತುದಾರನನ್ನು ಬಂಧಿಸಿದ ಎನ್‌ಐಎ

ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ರದೇಶಗಳಲ್ಲಿ ಪಿಎಫ್‌ಐನಿಂದ ನೇಮಕಗೊಂಡ ಯುವಕರಿಗೆ ಶಸ್ತ್ರಾಸ್ತ್ರಗಳನ್ನು ಹೇಗೆ ಬಳಸಬೇಕೆಂದು ಯೂನಸ್ ತರಬೇತಿಯನ್ನು ನೀಡುತ್ತಿದ್ದ.

First Published Jun 15, 2023, 9:53 AM IST | Last Updated Jun 15, 2023, 9:53 AM IST

ಬಳ್ಳಾರಿ: ಯುವಕರನ್ನು ಮೈಂಡ್‍ವಾಶ್ ಮಾಡಿ ಭಯೋತ್ಪಾದನೆಗೆ ನೂಕುತ್ತಿದ್ದ ಪಿಎಫ್‍ಐ ಮುಖಂಡನನ್ನು ಎನ್‍ಐಎ ಬಳ್ಳಾರಿಯ ಕೌಲ್ ಬಜಾರ್‌ನಲ್ಲಿ ಬುಧವಾರ ಬಂಧಿಸಿದೆ. ಈ ಮೂಲಕ ಗಣಿನಾಡಲ್ಲಿ ಪಿಎಫ್‌ಐ ಚಟುವಟಿಕೆ ಆರಂಭವಾಯ್ತಾ ಎಂಬ ಅನುಮಾನ ಈಗ ಮೂಡಿದೆ. ಈತ ಬಳ್ಳಾರಿಯ ಕೌಲ್‌ ಬಜಾರ್‌ನಲ್ಲಿ ತಲೆ ಮರೆಸಿಕೊಂಡಿದ್ದ. ಆಂಧ್ರ ಮತ್ತು ತೆಲಂಗಾಣದ ಯುವಕರಿಗೆ ಶಸ್ತ್ರ ತರಬೇತಿಯನ್ನು ನೀಡುತ್ತಿದ್ದ ಎಂದು ತಿಳಿದುಬಂದಿದೆ. ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಗುರಿಯೊಂದಿಗೆ ಅದಕ್ಕಾಗಿ ಯುವಜನರನ್ನು ಆಯ್ಕೆ ಮಾಡಲು ಮತ್ತು ಅವರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಲು ನಿರ್ಬಂಧಿತ ಪಿಎಫ್ಐ ನಾಯಕರು ಶ್ರಮಿಸುತ್ತಿದ್ದರು.ಈತ ತನ್ನ ಇಡೀ ಕುಟುಂಬವನ್ನು ಆಂಧ್ರಪ್ರದೇಶದಿಂದ ಸ್ಥಳಾಂತರಿಸಿ ಕರ್ನಾಟಕದಲ್ಲಿ ಸುಳ್ಳು ಗುರುತಿನಡಿಯಲ್ಲಿ ವಾಸಿಸುತ್ತಿದ್ದ.

ಇದನ್ನೂ ವೀಕ್ಷಿಸಿ: ಪರಿಸರ ಸಂರಕ್ಷಣೆಗೆ ಬದ್ಧವಾದ ಎಂಆರ್‌ಪಿಎಲ್‌: ಉಪನದಿಗಳ ಪುನಶ್ಚೇತನಕ್ಕೆ ಬೃಹತ್‌ ಯೋಜನೆ ಜಾರಿ

Video Top Stories