Asianet Suvarna News Asianet Suvarna News

ಮೈಸೂರು ಪ್ರಕರಣ,.. ನಾಯಕರ  ಅರ್ಥವಿಲ್ಲದ ಹೇಳಿಕೆಗಳು!

Aug 28, 2021, 12:07 AM IST

ಬೆಂಗಳೂರು(ಆ. 27)  ಮೈಸೂರು ಅತ್ಯಾಚಾರ ಪ್ರಕರಣ ತನಿಖೆ ನಡೆಯುತ್ತಿದೆ.  ಸಂತ್ರಸ್ತೆಯ ಗೆಳೆಯನಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.  ಘಟನೆಯ ಬಗ್ಗೆ ಯುವಕ ಹೇಳಿಕೆ ನೀಡಿದ್ದಾನೆ. 

'ರೇಪ್ ಮಾಡುವಂತವರಿಗೆ ಏನ್ ಕಟ್ ಮಾಡಬಹುದೋ ಅದನ್ನು ಕಟ್ ಮಾಡಬೇಕು'

ಮೈಸೂರು ಪ್ರಕರಣದಲ್ಲಿ ಯಾವ ಮಾಹಿತಿ ಸಿಕ್ಕಿದೆ ಎನ್ನುವುದಕ್ಕೆ ಸರ್ಕಾರ ಮತ್ತು ಪೊಲೀಸರ ಬಳಿ ಸರಿಯಾದ ಉತ್ತರ ಇಲ್ಲ. ಇನ್ನೊಂದು ಕಡೆ ಗೃಹ ಸಚಿವರು ತಮ್ಮ ಎಂದಿನ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಗೃಹ ಸಚಿವರ ಮೇಲೆ ಟೀಕೆ ಕೇಳಿ ಬಂದಿದೆ. ಮೈಸೂರಿನಲ್ಲಿ ಕಳೆದ ಕೆಲ ದಿನಗಳಿಂದ ಅಪರಾಧ ಕೃತ್ಯಗಳು ಹೆಚ್ಚಿವೆ. ಅಂಗಡಿಗೆ ನುಗ್ಗಿ ದರೋಡೆ, ಗ್ಯಾಂಗ್ ರೇಪ್ ಪ್ರಕರಣಗಳು ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಇದೇ ಕಾರಣಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ತಲೆದಂಡವಾಗಲಿದೆ ಎನ್ನುವ ಚರ್ಚೆ ಆರಂಭವಾಗಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ...