Asianet Suvarna News Asianet Suvarna News

Mysuru: ಕೆರೆ‌ ಏರಿ ಒಡೆದು ಹಾಕಿದ ಮೂಡಾ, ಅನುಮಾನ ಮೂಡಿಸಿದೆ ನಡೆ, ಭೂಮಾಫಿಯಾಗೆ ಸಹಾಯ.?

- ಭಾರೀ ಮಳೆಯಿಂದ  ಕೋಡಿ ಬಿದ್ದಿರುವ ನಗರದ ಕೆರೆ‌ಕಟ್ಟೆಗಳು 

- ಮಳೆಯಿಂದ ತುಂಬಿರುವ 200 ಎಕರೆ ವಿಸ್ತೀರ್ಣದ ಲಿಂಗಾಬುದಿ ಕೆರೆ 

- ತುಂಬಿಹರಿಯುವ ಮುನ್ನವೇ ಲಿಂಗಾಬುದಿ ಕೆರೆ ಏರಿ ಒಡೆದ ಮೂಡಾ

- ಅನುಮಾನ ಮೂಡಿಸಿರುವ ಕೆರೆ‌ ಏರಿ ಒಡೆದು ಹಾಕಿದ  ಮೂಡಾ ನಡೆ
 

ಮೈಸೂರು (ಡಿ. 01):  ಇತ್ತೀಚಿಗೆ ಸುರಿದ ಬಾರಿ ಮಳೆಗೆ (Untimely Rain) ಕೆರೆ ಕಟ್ಟೆಗಳೆಲ್ಲ  (lake)ತುಂಬಿ‌ ಕೋಡಿ ಬಿದ್ದಿವೆ. ಈ ನಡುವೆ ಲಿಂಗಾಬುದಿ ಕೆರೆಯು ಮಳೆಗೆ ತುಂಬಿದೆ. ಆದ್ರೆ ಕೆರೆ ಕೋಡಿ ಬೀಳುವ ಮುನ್ನವೆ ಕೋಡಿ ಒಡೆದಿದ್ದಾರೆ. ಕೆರೆ ಕೋಡಿ ಒಡೆದಕ್ಕೆ ಸಾಕಷ್ಟು ಅನುಮಾನ ಮೂಡಿದೆ. ಅಕ್ರಮ ಲೇಔಟ್ ನವರಿಗೆ ಸಹಾಯ ಮಾಡಲು ಕೆರೆ ತುಂಬುವ ಮುನ್ನವೆ ಕೆರೆ ಕೋಡಿ ಕಿತ್ತಾಕಿದ್ದಾರೆ‌ ಅನ್ನೋ ಆರೋಪ ಕೇಳಿ ಬರುತ್ತಿದೆ.

Mysuru: ಪುನೀತ್ ಪುಣ್ಯಸ್ಮರಣೆಗೆ ಹೋದ ಅಭಿಮಾನಿ ನಾಪತ್ತೆ, ಮಗನನ್ನು ಹುಡುಕಿಕೊಡಿ ಎಂದು ತಾಯಿ ಕಣ್ಣೀರು

ಮೈಸೂರಿನ‌ ಶ್ರೀರಾಂಪುರದಲ್ಲಿರುವ 200 ಎಕರೆ ವಿಸ್ತೀರ್ಣದ ಲಿಂಗಾಬುದಿ ಕೆರೆ ಕೂಡ ಭಾರಿ ಮಳೆಗೆ ತುಂಬಿಕೊಂಡಿದೆ. ಇನ್ನು ಎರಡು ಅಡಿ ತುಂಬಿದ್ದರೆ ಕೆರೆ ಸಹಜವಾಗಿಯೆ ಕೋಡಿ ಬೀಳಬೇಕಿತ್ತು.‌ ಆದ್ರೆ ಕೆರೆ ತುಂಬುವ ಮುನ್ನವೆ ಕೆರೆಯ ಏರಿಯನ್ನ ನಾಲ್ಕು ಅಡಿಗಳಷ್ಟು ಕಿತ್ತಾಕಿ ಕೆರೆ ಸಂಪೂರ್ಣ ತುಂಬಲು ಬಿಟ್ಟಿಲ್ಲ. ಇದ್ರಿಂದ ಕೆರೆ ಸಂಪೂರ್ಣವಾಗಿ ತುಂಬಿದ್ದರೆ ಕೆರೆಯ ಹಿನ್ನೀರಿನ ಪ್ರದೇಶದಲ್ಲಿರುವ ಲೇಔಟ್‌ಗಳಿಗೆ ನೀರು ತುಂಬುತಿತ್ತು. ಈ‌ ಕಾರಣದಿಂದಲೇ ಮೂಡದ ಅಧಿಕಾರಿಗಳು ಭೂ ಮಾಫಿಯಾದವರಿಗೆ ಸಹಾಯ ಮಾಡಲು ಕೆರೆ‌ ಏರಿಯನ್ನು ಒಡೆದು ಹಾಕಿ ಇರುವ ನೀರನ್ನು ಸಹ ಖಾಲಿ ಮಾಡಿದ್ದಾರೆ ಅಂತ ಆರೋಪಗಳು ಕೇಳಿ ಬಂದಿದೆ.

ಈ ವಿಚಾರವಾಗಿ ಮುಖ್ಯಮಂತ್ರಿ ರಾಜ್ಯಪಾಲರಿಗು ಪತ್ರ ಬರೆಯಲಾಗಿದೆ. ಸದ್ಯ ಅಧಿಕಾರಿಗಳ ನಡೆಯಂತು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿರೋದು ಸತ್ಯ. ‌ಮುಂದೆ ಇದು ತನಿಖೆಯಾದ್ರೆ ಸತ್ಯಾಸತ್ಯತೆ ಹೊರ ಬರಲಿದೆ.

Video Top Stories