Asianet Suvarna News Asianet Suvarna News

Mysuru: ಆನೆಯತ್ತ ಬೆಂಕಿ ಸೌದೆ ಎಸೆದ ಆಸಾಮಿ, ಸಿಟ್ಟಿಗೆದ್ದು ಮಾಡಿದ್ದೇನು ನೋಡಿ

Dec 6, 2021, 5:12 PM IST
  • facebook-logo
  • twitter-logo
  • whatsapp-logo

ಮೈಸೂರು (ಡಿ. 06): ನಾಗರಹೊಳೆ (Nagarahole) ರಾಷ್ಟ್ರೀಯ ಉದ್ಯಾನದ ಕಾಡಂಚಿನಲ್ಲಿ ಕಾಡಾನೆಗಳ (Elephant) ಹಾವಳಿ ಸಾಮಾನ್ಯ. ಗುಂಪು ಗುಂಪಾಗಿ ಓಡಾಡುತ್ತಿರುತ್ತವೆ. ಹೋಗಿ ಬರುವ ವಾಹನ ಸವಾರರಿಗೆ ಉಪಟಳ ಕೊಡುತ್ತವೆ. 

Bidar: ನಮ್ಮ ಕಾರ್ಯಕರ್ತರು ನೋಡ್ಕೋತಾರೆ, ನಿಮ್ಮ ಅಗತ್ಯವಿಲ್ಲ, ಲೇಡಿ ಪಿಎಸ್‌ಐಗೆ ಗೆಟೌಟ್‌ ಎಂದ ಸಿಎಂ

ಕಾಡಿನಿಂದ ನಾಡಿಗೆ ಬಂದ ಆನೆಯನ್ನು ಕಾಡಿಗಟ್ಟಲು ಗ್ರಾಮಸ್ಥರು ಹರಸಾಹಸಪಟ್ಟಿದ್ದಾರೆ. ಅಸಾಮಿಯೊಬ್ಬ ಆನೆಯತ್ತ ಬೆಂಕಿ ಎಸೆದಿದ್ದಾನೆ. ಸಿಟ್ಟಿಗೆದ್ದ ಆನೆ ಗ್ರಾಮಸ್ಥರತ್ತ ನುಗ್ಗಿದೆ. ವಾಹನ ಸವಾರರನ್ನು ಓಡಾಡಿಸಿದೆ. ವಿದ್ಯುತ್ ಕಂಬವನ್ನು ಕಿತ್ತೆಸೆದಿದೆ.  ಹುಣಸೂರು ತಾಲೂಕಿನ ಗುರುಪುರ ಟಿಬೆಟ್ ಕ್ಯಾಂಪ್‌ ಬಳಿ ಈ ಘಟನೆ ನಡೆದಿದೆ. 
 

Video Top Stories