ಕ್ಯಾಬಿನೆಟ್ ಸಭೆಯಲ್ಲಿ ಮುಡಾ ಅಕ್ರಮದ ಬಗ್ಗೆ ಚರ್ಚೆ! ಬಿಜೆಪಿಯಿಂದ ಮುಂದುವರೆದ ಪ್ರತಿಭಟನೆ ಕಹಳೆ

ಕ್ಯಾಬಿನೆಟ್ ಸಭೆಯಲ್ಲಿ ಮುಡಾ ಅಕ್ರಮದ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಬಿಜೆಪಿಯಿಂದ ಪ್ರತಿಭಟನೆ ಮುಂದುವರೆದಿದೆ.
 

First Published Jul 5, 2024, 11:36 AM IST | Last Updated Jul 5, 2024, 11:36 AM IST

ಕಾಂಗ್ರೆಸ್‌ಗೆ ಮೈಸೂರು ಮುಡಾ ಹಗರಣ(Mysore Muda site illegal allocation) ಸಂಕಷ್ಟ ತಂದೊಡ್ಡಿದ್ದು, ಬಿಜೆಪಿಯಿಂದ ಪ್ರತಿಭಟನೆ(Bjp protest)ಮುಂದುವರೆದಿದೆ. ಅಲ್ಲದೇ ಸಿಎಂ ಸಿದ್ದರಾಮಯ್ಯ(Siddaramaiah) ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದೆ. ಕಾಂಗ್ರೆಸ್ ಹಗರಣಗಳ ಬಗ್ಗೆ ಬಿಜೆಪಿ ಕಿಡಿಕಾರಿದೆ. ಕಾಂಗ್ರೆಸ್ (Congress) ಮುಖವಾಡ ಕಳಚಿ ಬಿದ್ದಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಲಾಯಿತು. ಕ್ಯಾಬಿನೆಟ್ ಸಭೆಯಲ್ಲಿ(Cabinet meeting) ಮುಡಾ ಅಕ್ರಮದ ಬಗ್ಗೆ ಚರ್ಚೆ ಮಾಡಲಾಗಿದೆ ಎನ್ನಲಾಗ್ತಿದೆ. ಅನೌಪಚಾರಿಕವಾಗಿ ಚರ್ಚೆಯನ್ನು ಸಿಎಂ ಸಿದ್ದರಾಮಯ್ಯ ನಡೆಸಿದ್ದಾರಂತೆ. ಮುಡಾ ಹಗರಣದ ಆರೋಪದಲ್ಲಿ ಹುರುಳಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರಂತೆ. 50:50 ಅನುಪಾತದಡಿ ಬಿಜೆಪಿ-ಜೆಡಿಎಸ್‌ನವರೂ ಸೈಟ್ ಪಡೆದಿದ್ದಾರೆ. ವಿಪಕ್ಷಗಳ ಸೈಟ್ ವಿಚಾರವನ್ನೂ ಹೊರಗೆಳೆಯಿರಿ ಎಂದು ಸಚಿವರಿಗೆ ಸಿಎಂ ಸೂಚನೆ ಕೊಟ್ಟಿದ್ದಾರೆ ಎನ್ನುತ್ತಿದೆ ಆಪ್ತ ಮೂಲಗಳು.

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್‌ನಲ್ಲಿನ ಬಣ ಸಂಘರ್ಷಕ್ಕೆ ಮತ್ತೊಂದು ಟ್ವಿಸ್ಟ್..! ಸಿದ್ದು ಬಣದ ವಿರುದ್ಧ ದೂರು ಕೊಟ್ಟರಾ ಲಕ್ಷ್ಮೀ ಹೆಬ್ಬಾಳ್ಕರ್..?