Asianet Suvarna News Asianet Suvarna News

ಕಾಂಗ್ರೆಸ್‌ನಲ್ಲಿನ ಬಣ ಸಂಘರ್ಷಕ್ಕೆ ಮತ್ತೊಂದು ಟ್ವಿಸ್ಟ್..! ಸಿದ್ದು ಬಣದ ವಿರುದ್ಧ ದೂರು ಕೊಟ್ಟರಾ ಲಕ್ಷ್ಮೀ ಹೆಬ್ಬಾಳ್ಕರ್..?

ಹೆಚ್ಚುವರಿ ಡಿಸಿಎಂ ಕೂಗು ಎತ್ತಿದವರ ವಿರುದ್ಧ ಹೆಬ್ಬಾಳ್ಕರ್ ದೂರು
ಮಲ್ಲಿಕಾರ್ಜುನ್ ಖರ್ಗೆ, ವೇಣುಗೋಪಾಲ್‌ಗೆ ದೂರು ಕೊಟ್ಟ ಸಚಿವೆ
ಪರೋಕ್ಷವಾಗಿ ಸಿದ್ದರಾಮಯ್ಯ ಆಪ್ತರಿಗೆ ವಾರ್ನ್ ಮಾಡುವಂತೆ ಮನವಿ

ಕಾಂಗ್ರೆಸ್‌ನಲ್ಲಿನ(Congress) ಬಣ ಸಂಘರ್ಷಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದ್ದು, ಹೆಚ್ಚುವರಿ ಡಿಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಟಕ್ಕರ್ ಕೊಟ್ಟಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್‌ರನ್ನು ಸಚಿವೆ ಭೇಟಿ ಮಾಡಿದ್ದಾರೆ. ಡಿಕೆಶಿ ಪರ ಹೈಕಮಾಂಡ್ ನಾಯಕರ ಎದುರು ಹೆಬ್ಬಾಳ್ಕರ್ ಬ್ಯಾಟಿಂಗ್ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ(Siddaramaiah), ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರೂ ನಮಗೆ ಮುಖ್ಯ. ಹೆಚ್ಚುವರಿ ಡಿಸಿಎಂ(DCM) ಚರ್ಚೆ ಮಾಡಿ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅನಗತ್ಯ ಗೊಂದಲ ಸೃಷ್ಟಿಸುವವರ ಮೇಲೆ ನೀವು ನಿಗಾ ಇಡಿ ಎಂದು ಹೇಳುವ ಮೂಲಕ ಸಿದ್ದು ಆಪ್ತರಿಗೆ ವಾರ್ನ್ ಮಾಡುವಂತೆ ಪರೋಕ್ಷವಾಗಿ ಹೈಕಮಾಂಡ್‌ಗೆ ಒತ್ತಾಯ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿಗಳಿಗೆ ಸರ್ಕಾರದ ಕಡಿವಾಣ: ಅನಧಿಕೃತ ವಾಹನಗಳ ವಿರುದ್ಧ ಸಾರಿಗೆ ಇಲಾಖೆ ಸಮರ

Video Top Stories