ದಸರಾದಲ್ಲಿ ಭಾಗಿಯಾಗಿದ್ದ ಕಲಾವಿದರ ಅಸಮಾಧಾನ: ಸ್ಪರ್ಧೆಯಲ್ಲಿ ಗೆದ್ರೂ ಸಿಗದ ಬಹುಮಾನದ ಮೊತ್ತ !
ಕಲಾವಿದರ ಹಲವು ಅಪಸ್ವರಗಳ ನಡುವೆ ಆರಂಭವಾದ ಈ ಬಾರಿಯ ದಸರಾ ಮುಕ್ತಾಯವಾದರೂ ಕಲಾವಿದರ ತೊಂದರೆಗಳು ತಪ್ಪಿಲ್ಲ. ದಸರಾ ಸ್ಪರ್ಧೆಯಲ್ಲಿ ಗೆದ್ದ ತಪ್ಪಿಗೆ ಬಹುಮಾನವನ್ನೂ ಪಡೆಯದೆ ದಂಡ ಕಟ್ಟುವ ಪರಿಸ್ಥಿತಿ ಬಂದಿದೆ.
2023 ರ ವಿಶ್ವವಿಖ್ಯಾತ ಮೈಸೂರು ದಸರಾ ಮುಕ್ತಾಯ ಆದರೂ ಕಲಾವಿದರ ಅಸಮಾಧಾನ ನಿಂತಿಲ್ಲ. ದಸರಾ(Mysore dasara) ಆರಂಭದಲ್ಲೇ ಕಲಾವಿದರನ್ನು ಆಹ್ವಾನಿಸಲು ಅಧಿಕಾರಿಗಳು ಕಿಕ್‌ಬ್ಯಾಕ್ ಕೇಳಿದ ಆರೋಪಗಳು ಬಂದಿದ್ದವು. ಈಗ ದಸರಾ ಕಲಾವಿದರಿಗೆ(Artists) ನೀಡಿದ ಬಹುಮಾನದ ಚೆಕ್(Prize Check) ವಾಪಸ್ ಆಗಿದ್ದು, ಇದು ಸ್ಪರ್ಧೆಯಲ್ಲಿ ಗೆದ್ದ ಕಲಾವಿದನ ಆಕ್ರೋಶಕ್ಕೆ ಕಾರಣವಾಗಿದೆ. ಮೈಸೂರಿನ ಹವ್ಯಾಸಿ ಛಾಯಚಿತ್ರಗಾರ ಎನ್.ಜಿ ಸುಧೀರ್ ದಸರಾ ಲಲಿತ ಕಲೆ ಹಾಗೂ ಕರಕುಶಲ ಉಪಸಮಿತಿ ನಡೆಸಿದ ಛಾಯಾಚಿತ್ರ ಸ್ಪರ್ಧೆಯಲ್ಲಿ ಗೆದ್ದು ಬಹುಮಾನ ಪಡೆದಿದ್ದರು. ಬಹುಮಾನವಾಗಿ 7 ಸಾವಿರ ರೂ ಚೆಕ್ ನೀಡಲಾಗಿತ್ತು. ಅಕ್ಟೋಬರ್ 26 ರಂದು ಚೆಕ್ ನೀಡಲಾಗಿದ್ದು, 27 ರಂದು ಸುಧೀರ್ ಬ್ಯಾಂಕ್ಗೆ ಚೆಕ್ನ್ನು ಹಾಜರುಪಡಿಸಿದ್ರು. ಆದ್ರೆ ಅದೇ ಚೆಕ್ ಅಕ್ಟೋಬರ್ 30 ರಂದು ವಾಪಸ್ ಆಗಿದೆ. ವಾಪಸ್ ಆಗುವ ವೇಳೆ ಸುಧೀರ್ ಅಕೌಂಟ್ ನಿಂದ 118 ರುಪಾಯಿ ಕಟ್ ಮಾಡಲಾಗಿದೆ. ಎಲ್ಲಾ ಬೆಳವಣಿಗೆಯನ್ನು ಸುಧೀರ ಅವರು ನಮ್ಮ ಪ್ರತಿನಿಧಿ ಮಧು ಬಳಿ ವಿವರವಾಗಿ ವಿವರಿಸಿದ್ದಾರೆ ಕೇಳಿ. ಇನ್ನು ಚೆಕ್ ವಾಪಸ್ಸಾದ ಪ್ರಕರಣದ ಬಗ್ಗೆ ಸ್ಪಷ್ಟನೆ ಕೇಳಲು ಲಲಿತ ಕಲೆ ಹಾಗೂ ಕರಕುಶಲ ಉಪ ಸಮಿತಿ ಕಾರ್ಯದರ್ಶಿಯನ್ನು ಸಂಪರ್ಕಿಸುವ ಪ್ರಯತ್ನವೂ ನಡೆಯಿತು. ಆದರೆ ಅಧಿಕಾರಿ ಸಂಪರ್ಕಕ್ಕೆ ಸಿಗಲೇ ಇಲ್ಲ. ಬಹುಮಾನ ಬಂದರೂ ಬಹುಮಾನದ ಮೊತ್ತ ಮಾತ್ರ ಸಿಗಲೇ ಇಲ್ಲ.
ಇದನ್ನೂ ವೀಕ್ಷಿಸಿ: ಕಮಲ್ ಹುಟ್ಟುಹಬ್ಬಕ್ಕೆ ಇಂಡಿಯನ್ 2 ಗ್ಲಿಂಪ್ಸ್ ಉಡುಗೊರೆ: ‘ಸಕಲಕಲಾವಲ್ಲಭ’ನ ಜೊತೆಗೆ ಕನ್ನಡಿಗ ಸುದೀಪ್..!