ಕಮಲ್ ಹುಟ್ಟುಹಬ್ಬಕ್ಕೆ ಇಂಡಿಯನ್ 2 ಗ್ಲಿಂಪ್ಸ್ ಉಡುಗೊರೆ: ‘ಸಕಲಕಲಾವಲ್ಲಭ’ನ ಜೊತೆಗೆ ಕನ್ನಡಿಗ ಸುದೀಪ್..!

1996, ಮೇ 9 ಅಂದು ಕಾಲಿವುಡ್ ಸಿನಿ ಪ್ರೇಕ್ಷಕರು ಮನೋರಂಜನೆಯಲ್ಲಿ ಸಂಭ್ರಮಿಸಿದ್ರು. ಅಷ್ಟೇ ಅಲ್ಲ ಅವರೆಲ್ಲಾ ದೇಶಾಭಿಮಾನ ದೇಶಪ್ರೇಮದ ಕಟ್ಟೆ ಒಡೆದಿತ್ತು. ದೇಶದ್ರೋಹಿಗಳು ಯಾರಾದ್ರೂ ಎದುರಾದ್ರೆ ಅವರನ್ನ ಹೇಳ ಹೆಸರಿಲ್ಲದಂತೆ ಮಾಡುವಷ್ಟು ರೋಷಾ ಆ ಸಿನಿಮಾ ನೋಡಿದವರಲ್ಲಿತ್ತು. ಅದಕ್ಕೆ ಕಾರಣ ಆಗಿದ್ದು ನಟ  ಕಮಲ್ ಹಾಸನ್ರ ಇಂಡಿಯನ್ ಸಿನಿಮಾ.
 

First Published Nov 4, 2023, 9:29 AM IST | Last Updated Nov 4, 2023, 9:29 AM IST

1996ರಲ್ಲಿ ಬಂದ ಬಂದ ಇಂಡಿಯನ್ ಸಿನಿಮಾ ಇಂಡಿಯನ್ ಸಿನಿಮಾ ಜಗತ್ತಿನ ಸೂಪರ್ ಡೂಪರ್ ಹಿಟ್ ಚಿತ್ರ. ನಿರ್ದೇಶನ ಎಸ್ ಶಂಕರ್ ಕಮಲ್ ಹಾಸನ್(Kamal Haasan) ಸಾರಥ್ಯದ ಈ ಮೂವಿ ಇಂದಿಗೂ ಜನರ ಮನದಲ್ಲಿದೆ. ಇದೀಗ ಅದೇ ಎಸ್ ಶಂಕರ್ ಹಾಗೂ ಕಮಲ್ ಹಾಸನ್ ಕಾಂಬಿನೇಷನ್‌ನಲ್ಲಿ ಇಂಡಿಯನ್(Indian) ಸೀಕ್ವೆಲ್ ಇಂಡಿಯನ್2 ಸಿನಿಮಾ ಬರುತ್ತಿದೆ. ಈಗ ಇಂಡಿಯನ್ 2 ಗ್ಲಿಂಪ್ಸ್ ರಿಲೀಸ್(First look) ಆಗಿದೆ. ಇಂಡಿಯನ್ 2 ರಿಟೈರ್ಡ್ ಫ್ರೀಡಂ ಫೈಟರ್ ಒಬ್ಬನ ಕತೆಯ ಸಿನಿಮಾ. ನವೆಂಬರ್ 7ಕ್ಕೆ ಉಳಗನಾಯಗನ್ ಕಮಲ್ ಹಾಸನ್ ಹುಟ್ಟುಹಬ್ಬ. ಹೀಗಾಗಿ ಮೂರು ದಿನ ಮೊದಲೇ ಇಂಡಿಯನ್2ನ ಹೀರೋ ಕಮಲ್ ಹಸನ್ನ ಇಂಟ್ರೋ ಗ್ಲಿಂಪ್ಸ್ ರಿಲೀಸ್ ಮಾಡಿದ್ದಾರೆ. ಇಂಡಿಯನ್ 2 ಆಕ್ಷನ್ ಡ್ರಾಮ. ಇಲ್ಲಿ ಕಮಲ್ ಹಾಸನ್ ಡಿಫ್ರೆಂಟ್ ಗೆಟಪ್ಗಳು ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಆಗಿವೆ. ವಿಕ್ರಂ ಸಿನಿಮಾದ ಸೂಪರ್ ಸಕ್ಸಸ್ನಲ್ಲಿರೋ ಕಮಲ್ಗೆ ಇಂಡಿಯನ್2 ಕೂಡ ಬಿಗ್ ಬ್ರೇಕ್ ಕೊಡುತ್ತೆ ಅನ್ನೋ ನಂಬಿಕೆಯನ್ನ ಈ ಇಂಟ್ರೋ ಗ್ಲಿಂಪ್ಸ್ ಸಾರುತ್ತಿದೆ. ಇಂಡಿಯನ್2 ಸಿನಿಮಾ ತಮಿಳು ಕನ್ನಡ ಸೇರಿ ಐದು ಭಾಷೆಯಲ್ಲಿ ಸಿದ್ಧವಾಗ್ತಿದೆ. ಹೀಗಾಗಿ ಕನ್ನಡದ ಇಂಡಿಯನ್ಸ್ ಗ್ಲಿಂಪ್ಸ್‌ನನ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kichcha Sudeep) ರಿಲೀಸ್ ಮಾಡಿದ್ದಾರೆ. ಮತ್ತೊಂದು ಇಂಟ್ರೆಸ್ಟಿಂಗ್ ಏನ್ ಗೊತ್ತಾ. ಇದೇ ಫಸ್ಟ್ ಟೈಂ ಕಮಲ್ ಹಾಸನ್ರ ಸಿನಿಮಾವನ್ನ ಪ್ರಮೋಟ್ ಮಾಡಿದ್ದಾರೆ ಸೂಪರ್ ಸ್ಟಾರ್ ರಜನಿಕಾಂತ್. ರಜನಿ ತಮಿಳಿನ ಇಂಡಿಯನ್2(Indian 2) ಗ್ಲಿಂಪ್ಸ್ ರಿಲೀಸ್ ಮಾಡಿದ್ದಾರೆ. ಹಿಂದಿಯಲ್ಲಿ ಅಮೀರ್ ಖಾನ್, ಮಲೆಯಾಳಂನಲ್ಲಿ ಮೋಹನ್ ಲಾಲ್, ತೆಲುಗುನಲ್ಲಿ ಡೈರೆಕ್ಟರ್ ರಾಜಮೌಳಿ ಇಂಡಿಯನ್2 ಸಿನಿಮಾ ಜೊತೆ ನಿಂತಿದ್ದಾರೆ. ಈ ಮೂಲಕ ನಿರ್ದೇಶಕ ಎಸ್ ಶಂಕರ್ ಮತ್ತು ಕಮಲ್ ಹಾಸನ್ರ ಮತ್ತೊಂದು ಬಿಗ್ ಸಿನಿಮಾಗೆ ಇಂಡಿ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ಗಳು ಜೊತೆಯಾದಂತಾಗಿದೆ. 

ಇದನ್ನೂ ವೀಕ್ಷಿಸಿ:  ಮತ್ತೊಂದು ದೊಡ್ಡ ಎಕ್ಸ್‌ಪಿರಿಮೆಂಟ್‌ನಲ್ಲಿ ವಿಕ್ರಂ: ಮೈ ನಡುಗಿಸುವಂತೆ ಎಂಟ್ರಿ ಕೊಟ್ಟ ಚಿಯಾನ್..!