Asianet Suvarna News Asianet Suvarna News

Yadgiri News: ವಿದ್ಯುತ್ ಕಂಬದ ವೈರ್‌ಗೆ ಜೋತು ಬಿದ್ದ ಪುರಸಭೆ ಡಿ ಗ್ರೂಪ್ ನೌಕರ..! ವಿಡಿಯೋ ನೋಡಿ

ಬೀದಿ ಕಂಬಕ್ಕೆ ಬಲ್ಬ್ ಅಳವಡಿಸಲು ಹೋಗಿ ಪುರಸಭೆ ಡಿ ಗ್ರೂಪ್ ನೌಕರ ಕರೆಂಟ್‌ ವೈರ್‌ಗೆ ನೇತು ಬಿದ್ದ ಘಟನೆ ಯಾದಗಿರಿಯಲ್ಲಿ ನಡೆದಿದೆ.
 

ಯಾದಗಿರಿ: ಬೀದಿ ಕಂಬಕ್ಕೆ (Street pole) ಬಲ್ಬ್ ಹಾಕಲು ಮುಂದಾದಾಗ ಪುರಸಭೆ ಡಿ ಗ್ರೂಪ್ ನೌಕರ (Municipal D Group employee)ಕರೆಂಟ್ ವೈರ್‌ಗೆ ನೇತು ಬಿದ್ದ ಘಟನೆ ಯಾದಗಿರಿ (yadgiri) ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ನಡೆದಿದೆ. ಕೆಲ ಕಾಲ ವಿದ್ಯುತ್ ತಂತಿಗೆ(Current wire) ಜೋತು ನೆಲಕ್ಕೆ ಬಿದ್ದಿದ್ದಾರೆ. ಮುಂಜಾಗ್ರತೆಯಿಲ್ಲದೇ ಬಲ್ಬ್ ಅಳವಡಿಸಲು ರವಿ ಶಹಾಪುರ ಕಂಬವೇರಿದ್ದೇ ಈ ಘಟನೆ ಕಾರಣ ಎನ್ನಲಾಗ್ತಿದೆ. ಕೆಂಭಾವಿ ಪುರಸಭೆ 'ಡಿ' ಗ್ರೂಪ್ ನೌಕರನಾಗಿ ರವಿ ಶಹಾಪುರ ಕಾರ್ಯನಿರ್ವಹಿಸುತ್ತಿದ್ದಾರೆ. ಕರೆಂಟ್ ತಂತಿಗೆ ಜೋತು ಬಿದ್ದ ನೌಕರನ ಜೀವವನ್ನು ಸ್ಥಳೀಯರು ಉಳಿಸಿದ್ದಾರೆ. ಕೆಂಭಾವಿ ಪುರಸಭೆ ವಾರ್ಡ್‌ಗಳಲ್ಲಿ ಬಲ್ಬ್ ಅಳವಡಿಸುವ ವೇಳೆ ಘಟನೆ ನಡೆದಿದೆ. ಬಡಿಗೆಯಿಂದ ತಿವಿದು ನೌಕರನ ಜೀವವನ್ನು ಸ್ಥಳೀಯರು ಉಳಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ  ಕೆಂಭಾವಿ ಪಟ್ಟಣದಲ್ಲಿಯೇ ಮೂರು ವಿದ್ಯುತ ಅವಘಡ ನಡೆದಿವೆ. ಗಾಯಾಳು ರವಿಯನ್ನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ದಾಖಲು‌ ಮಾಡಲಾಗಿದ್ದು, ಕೆಂಭಾವಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ವೀಕ್ಷಿಸಿ:  Chikkamagaluru: ಬಟ್ಟೆ ಹೊತ್ತೊಯ್ದ ಪೊಲೀಸರ ಹಿಂದೆ ಚಡ್ಡಿಯಲ್ಲಿ ಸರ್‌..ಸರ್‌ ಎಂದು ಓಡಿದ ಯುವಕರು! ಕಾರಣವೇನು ಗೊತ್ತಾ?

Video Top Stories