Chikkamagaluru: ಬಟ್ಟೆ ಹೊತ್ತೊಯ್ದ ಪೊಲೀಸರ ಹಿಂದೆ ಚಡ್ಡಿಯಲ್ಲಿ ಸರ್‌..ಸರ್‌ ಎಂದು ಓಡಿದ ಯುವಕರು! ಕಾರಣವೇನು ಗೊತ್ತಾ?

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಫಾಲ್ಸ್ ಬಳಿ ಹುಚ್ಚಾಟ ಮೆರೆಯುತ್ತಿದ್ದ ಪ್ರವಾಸಿಗರ ಬಟ್ಟೆಯನ್ನು ಪೊಲೀಸರು ತೆಗೆದುಕೊಂಡು ಹೋಗಿರುವ ಘಟನೆ ನಡೆದಿದೆ.

Share this Video
  • FB
  • Linkdin
  • Whatsapp

ಚಿಕ್ಕಮಗಳೂರು: ಬಟ್ಟೆ ಹೊತ್ತೊಯ್ದ ಪೊಲೀಸರ(Police) ಹಿಂದೆ ಚಡ್ಡಿಯಲ್ಲಿ ಯುವಕರು ಓಡಿರುವ ಘಟನೆ ಮೂಡಿಗೆರೆ (Mudigere) ತಾಲೂಕಿನ ಚಾರ್ಮಾಡಿ ಫಾಲ್ಸ್ (Charmadi Falls) ಬಳಿ ನಡೆದಿದೆ. ಚಾರ್ಮಾಡಿ ನಿಷೇಧಿತ ಪ್ರದೇಶದಲ್ಲಿ ಬಂಡೆ ಹತ್ತಿ ಪ್ರವಾಸಿಗರು ಹುಚ್ಚಾಟ ತೋರುತ್ತಿದ್ದರು. ಈ ಮೂಲಕ ಜಲಪಾತದ ಬಳಿ ಸ್ನಾನ ಮಾಡುತ್ತಿದ್ದ ಪ್ರವಾಸಿಗರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಪ್ರವಾಸಿಗರ ಬಟ್ಟೆಯನ್ನು ತಂದು ಗಸ್ತು ವಾಹನಕ್ಕೆ ಪೊಲೀಸರು ತುಂಬಿದ್ದಾರೆ. ಆರಂಭದಲ್ಲಿ ಸರ್...ಸರ್... ಅನ್ನುತ್ತಿದ್ದ ಯುವಕರು ಕ್ಲೈಮ್ಯಾಕ್ಸ್ ನಲ್ಲಿ ಪೊಲೀಸರ ಜೊತೆಯೇ ಜಗಳವಾಡಲು ಶುರು ಮಾಡಿದ್ದಾರೆ. ಪೊಲೀಸರಿಗೆ ಆವಾಜ್ ಹಾಕಿ ಪೇಚಿಗೆ ಸಿಲುಕಿದ್ದಾರೆ. ಬಟ್ಟೆ ಕೊಡುವಂತೆ ಪ್ರವಾಸಿಗರು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಎಚ್ಚರಿಕೆ ಜೊತೆಗೆ ಬಟ್ಟೆಯನ್ನು ಕೊಟ್ಟು ಪೊಲೀಸರು ಕಳಿಸಿದ್ದಾರೆ. ಬಣಕಲ್ ಗಸ್ತು ಪೊಲೀಸರಿಂದ ಚಾರ್ಮಾಡಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಇದನ್ನೂ ವೀಕ್ಷಿಸಿ: ಇಂದೇ ಮಾಜಿ ಸಚಿವ‌ ನಾಗೇಂದ್ರ ಬಂಧನ ಸಾಧ್ಯತೆ..! ಹಗರಣಕ್ಕೆ ಸಂಬಂಧಿಸಿದಂತೆ SITಯಿಂದ ಇಡಿ ಮಾಹಿತಿ ಸಂಗ್ರಹ

Related Video