Asianet Suvarna News Asianet Suvarna News

ಮಂಗಳೂರಲ್ಲಿ ಸಿಡಿದೆದ್ದ ಬೀದಿಬದಿ ವ್ಯಾಪಾರಿಗಳು: ಪಾಲಿಕೆಗೆ ಮುತ್ತಿಗೆ ಯತ್ನ, ಅಧಿಕಾರಿಗಳ ವಿರುದ್ಧ ಆಕ್ರೋಶ

ಅವರೆಲ್ಲಾ ಮಂಗಳೂರು ಮಹಾನಗರ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳು. ತಮ್ಮ ಜೀವನದ ಬಂಡಿ ಸಾಗಿಸಲು ಬೀದಿಬದಿ ವ್ಯಾಪಾರವನ್ನು ಆಶ್ರಯಿಸಿದ್ದವರು ದಿಢೀರ್ ಆಗಿ ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದ್ರು. 

ಕೈಯಲ್ಲಿ ಅರ್ಜಿಯ ಪ್ರತಿ ಹಿಡ್ಕೊಂಡು ಮಹಾನಗರ ಪಾಲಿಕೆ ಮುಂದೆ ಜಮಾಯಿಸಿದ ಜನ. ಕಮೀಷನರ್ ಕಚೇರಿಗೆ ಮುತ್ತಿಗೆ ಯತ್ನ. ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ..ಈ ದೃಶ್ಯ ಕಂಡು ಬಂದಿದ್ದು ಮಂಗಳೂರು ಮಹಾನಗರ ಪಾಳಿಕೆ (Mangalore Municipal Corporation) ಎದುರು. ಇವರೆಲ್ಲ ಮಹಾನಗರ ಪಾಲಿಕೆ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳು(Traders), ಪಟ್ಟಣ ವ್ಯಾಪಾರ ಸಮಿತಿ ಅನುಮೋದನೆ ನೀಡಿ ವರ್ಷ ಕಳೆದ್ರೂ ಇವರಿಗೆ ಗುರುತಿನ ಚೀಟಿ ಸಿಕ್ಕಿಲ್ಲ. ಎಷ್ಟೇ ಮನವಿ ಮಾಡಿದ್ರು, ಪ್ರತಿಭಟನೆ ನಡೆಸಿದ್ರು ಗುರುತಿನ ಚೀಟಿ(Identity Card) ನೀಡಿಲ್ಲ.ಹೀಗಾಗಿ ಕಮೀಷನರ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ರು.  2021ರಲ್ಲಿ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ 667 ಮಂದಿಯನ್ನು ಅಧಿಕೃತ ಬೀದಿಬದಿ ವ್ಯಾಪಾರಿಗಳೆಂದು ಪಟ್ಟಣ ವ್ಯಾಪಾರ ಸಮಿತಿ ಅನುಮೋದನೆಗೊಳಿಸಿದೆ. ಆದ್ರೂ ಅನುಮೋದನೆಗೊಂಡ 667 ವ್ಯಾಪಾರಿಗಳಿಗೆ ಗುರುತಿನ ಚೀಟಿ, ಪ್ರಮಾಣಪತ್ರ ನೀಡಿಲ್ಲ. ಇದರಿಂದ ಸಿಟ್ಟಿಗೆದ್ದು ಪಾಲಿಕೆ ಕಚೇರಿಗೆ ಮುತ್ತಿಗೆ ಯತ್ನ ನಡೆಸಿದ್ರು. ಇದರಿಂದ ಎಚ್ಚೆತ್ತ ಕಮಿಷನರ್ ಈ ತಿಂಗಳೊಳಗೆ ಮೇಯರ್ ಹಾಗೂ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಕಾರ್ಯಕ್ರಮ ಮಾಡಿ ಗುರುತಿನ ಚೀಟಿ, ಪ್ರಮಾಣ ಪತ್ರ ವಿತರಿಸುವುದಾಗಿ ಭರವಸೆ ನೀಡಿದ್ರು. ಕೊಟ್ಟ ಮಾತಿನಂತೆ ಭರವಸೆ ಈಡೇರಿಸಬೇಕು,.. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ. ಕನ್ನಡ ರಾಜ್ಯೋತ್ಸವ ದಿನ ಉಸ್ತುವಾರಿ ಸಚಿವರ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಿ, ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂದು ವ್ಯಾಪಾರಿಗಳು ಎಚ್ಚರಿಸಿದ್ರು.

ಇದನ್ನೂ ವೀಕ್ಷಿಸಿ:  ಹಾವೇರಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳು ಬಂದ್.. ಬಡವರ ಪರದಾಟ