ಹಾವೇರಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳು ಬಂದ್.. ಬಡವರ ಪರದಾಟ
ಹಸಿವು ಮುಕ್ತ ಕರ್ನಾಟಕಕ್ಕಾಗಿ ಸಿದ್ದರಾಮಯ್ಯ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಮತ್ತೆ ಹಳ್ಳಹಿಡಿದಿದೆ. ಹಸಿವು ನೀಗಿಸೋ ಬದಲು ಬಡವರ ನರಳಾಟಕ್ಕೆ ಕಾರಣವಾಗಿದೆ.
ಬಡವರ ಹಸಿವು ನೀಗಿಸಲು ಸಿದ್ದರಾಮಯ್ಯ(Siddaramaiah) ಸರ್ಕಾರ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್(Indira Canteen) ತೆರೆದಿದ್ರು.. 2013ರಲ್ಲಿ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಜಾರಿಗೆ ತಂದ ಜನಪ್ರಿಯ ಯೋಜನೆಯಲ್ಲೊಂದಾದ ಇಂದಿರಾ ಕ್ಯಾಂಟೀನ್ಗೆ, 2023ರಲ್ಲಿ ಸಿದ್ದರಾಮಯ್ಯ ಅವಧಿಯಲ್ಲೇ ಗ್ರಹಣ ಹಿಡಿದಿದೆ. ಇದು ಹಾವೇರಿ(Haveri) ಜಿಲ್ಲೆಯಲ್ಲಿ ಸಿದ್ದರಾಮಯ್ಯ ಕನಸಿನ ಯೋಜನೆ ಹಳ್ಳಹಿಡಿದ ಸ್ಟೋರಿ. ಸರಿಯಾದ ನಿರ್ವಹಣೆಯಿಲ್ಲದೇ ಜಿಲ್ಲೆಯಾದ್ಯಂತ ಬಹುತೇಕ ಇಂದಿರಾ ಕ್ಯಾಂಟೀನ್ ಕ್ಲೋಸ್ ಆಗಿವೆ. ಜಿಲ್ಲೆಯಲ್ಲಿ 3 ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಆದ್ರೆ, ಮೂರು ಕ್ಯಾಂಟೀನ್ಗಳು ಕ್ಲೋಸ್ ಆಗಿವೆ. ಹಾವೇರಿ ನಗರದ ಪಶು ಸಂಗೋಪನೆ ಇಲಾಖೆ ಕಚೇರಿ ಬಳಿಯೇ ಒಂದು ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಆರಂಭದ ಒಂದೆರಡು ವರ್ಷ ಜನರು ಸಾಲುಗಟ್ಟಿನಿಂತು ಟೋಕನ್ ಪಡೆದು ಊಟ, ಉಪಾಹಾರ ಮಾಡುತ್ತಿದ್ದರು. ಆದರೆ, ಬರುಬರುತ್ತ ಕ್ಯಾಂಟೀನ್ ಸರಿಯಾಗಿ ನಿರ್ವಹಣೆ ಮಾಡದೇ ಬಂದ್ ಮಾಡಿದ್ದಾರೆ. ಇದೀಗ ಈ ಕ್ಯಾಂಟೀನ್ ಕ್ಯಾಂಟೀನ್ ಪುಂಡ ಪೋಕರಿಗಳ ಅಡ್ಡೆಯಾಗಿದೆ. ಜಿಲ್ಲಾಸ್ಪತ್ರೆಗೆ ಹತ್ತಿರವೇ ಈ ಇಂದಿರಾ ಕ್ಯಾಂಟಿನ್ ಇದ್ದಿದ್ದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರಿಗೆ ಆಸರೆಯಾಗಿತ್ತು. ನಗರದಲ್ಲಿನ ಬಡವರ ಹಸಿವನ್ನೂ ನೀಗಿಸುತ್ತಿದ್ದ ಕ್ಯಾಂಟೀನ್ ಈಗ ಕ್ಲೋಸ್ ಆಗಿದೆ. ಹಾವೇರಿ ಜಿಲ್ಲೆಗೆ ಒಟ್ಟು 8 ಇಂದಿರಾ ಕ್ಯಾಂಟೀನ್ಗಳನ್ನು ಮಂಜೂರು ಮಾಡಲಾಗಿದೆ. ಆದ್ರೆ, ಮೂರು ಕ್ಯಾಂಟೀನ್ಗಳನ್ನು ಮಾತ್ರ ತೆರೆಯಲಾಗಿತ್ತು. ಇನ್ನುಳಿದ 5 ಕ್ಯಾಂಟೀನ್‌ಗಳಿಗೆ ಜಾಗ ಹುಡುಕೋದ್ರಲ್ಲೇ ಕಾಲ ತಳ್ಳುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ರು ರಾಜ್ಯದ ಕ್ರೀಡಾಪಟುಗಳಿಗೆ ಸಿಗ್ತಿಲ್ವಾ ಬೆಂಬಲ ?