ಇಂದೇ ಮಾಜಿ ಸಚಿವ‌ ನಾಗೇಂದ್ರ ಬಂಧನ ಸಾಧ್ಯತೆ..! ಹಗರಣಕ್ಕೆ ಸಂಬಂಧಿಸಿದಂತೆ SITಯಿಂದ ಇಡಿ ಮಾಹಿತಿ ಸಂಗ್ರಹ

ಕೋರ್ಟ್ ಅನುಮತಿ ಪಡೆದು ಆರೋಪಿಗಳ ವಿಚಾರಣೆ ನಡೆಸುವ ಸಾಧ್ಯತೆ ಇದ್ದು, ಇಂದೇ ಮಾಜಿ ಸಚಿವ‌ ನಾಗೇಂದ್ರ ಬಂಧನವಾಗಬಹುದು ಎನ್ನಲಾಗ್ತಿದೆ.
 

First Published Jul 10, 2024, 12:57 PM IST | Last Updated Jul 10, 2024, 12:58 PM IST

ವಾಲ್ಮೀಕಿ ನಿಗಮ ಹಗರಣದ( Valmiki Development Corporation scam ) ಆರೋಪಿಗಳಿಗೆ ED ಶಾಕ್ ನೀಡಿದ್ದು, ಇಂದೇ ಇಂದೇ ಮಾಜಿ ಸಚಿವ‌ ನಾಗೇಂದ್ರ(Nagendra ) ಬಂಧನ(Arrest) ಸಾಧ್ಯತೆ ಇದೆ. ಈ ಹಗರಣಕ್ಕೆ ಸಂಬಂಧಿಸಿದಂತೆ SITಯಿಂದ ಇಡಿ(ED) ಮಾಹಿತಿ ಸಂಗ್ರಹಿಸಿದೆ. ಕೋರ್ಟ್ ಅನುಮತಿ ಪಡೆದು ಆರೋಪಿಗಳ ವಿಚಾರಣೆ ನಡೆಸಬಹುದು. ಪರಪ್ಪನ ಅಗ್ರಹಾರ ಜೈಲಿನಲ್ಲೇ ಆರೋಪಿಗಳ ವಿಚಾರಣೆ ನಡೆಯುವ ಸಾಧ್ಯತೆ ಇದೆ. ನಾಗೇಂದ್ರಗೆ 50ರಿಂದ 60 ಕೋಟಿ ಹೋಗಿರುವ ಅನುಮಾನ ಇದೆ. ನಾಗೇಂದ್ರಗೆ ದೊಡ್ಡಪಾಲು ಹೋದ ಬಗ್ಗೆ ಇಡಿಗೆ ಮಾಹಿತಿ ಸಿಕ್ಕಿದ್ದು, ನಾಗೇಂದ್ರ ಮನೆಯಲ್ಲೇ ವಿಚಾರಣೆ ನಡೆಸಿ ಬಂಧಿಸುವ ಸಾಧ್ಯತೆ ಇದೆ. ನಾಗೇಂದ್ರ ಬಂಧನ ಸಾಧ್ಯತೆ ಬಗ್ಗೆ‌ ಇಡಿ ಮೂಲಗಳ ಮಾಹಿತಿ ನೀಡಿವೆ.

ಇದನ್ನೂ ವೀಕ್ಷಿಸಿ:  ED Attack: ಬೆಂಗಳೂರು ಶಾಸಕರ ಭವನದ ಮೇಲೆ ಇಡಿ ದಾಳಿ: ನಾಗೇಂದ್ರ, ದದ್ದಲ್ ಕೊಠಡಿಗಳಲ್ಲಿ ದಾಖಲೆಗಳ ಪರಿಶೀಲನೆ

Video Top Stories