ಮೊಬೈಲ್‌ನಲ್ಲಿ ಅಮ್ಮನ ನೆನಪಿದೆ, ಹುಡುಕಿಕೊಡಿ ಪ್ಲೀಸ್, ಡಿಸಿ, ಶಾಸಕರಿಗೆ ಪತ್ರ ಬರೆದ ಮಗಳು

- ಕೊರೊನಾದಿಂದ ತಾಯಿಯನ್ನು ಕಳೆದುಕೊಂಡ ಮಗಳ ಮನವಿ

- ಅಮ್ಮನ ಮೊಬೈಲ್ ಹುಡುಕಿಕೊಡಿ ಪ್ಲೀಸ್

- ಮಡಿಕೇರಿ ಆಸ್ಪತ್ರೆಯಲ್ಲಿ ಮನಕಲಕುವ ಘಟನೆ 

First Published May 23, 2021, 3:04 PM IST | Last Updated May 23, 2021, 3:23 PM IST

ಕೊಡಗು (ಮೇ. 23): ಮಡಿಕೇರಿ ಆಸ್ಪತ್ರೆಯಲ್ಲಿ ಮನಕಲಕುವ ಘಟನೆ ನಡೆದಿದೆ. ತಾಯಿಯನ್ನು ಕಳೆದುಕೊಂಡ ಮಗಳು ಭಾವನಾತ್ಮಕ ಪತ್ರ ಬರೆದಿದ್ದಾಳೆ. ಮೇ 16 ರಂದು ಕೋವಿಡ್‌ನಿಂದ ತಾಯಿ ಮೃತಪಟ್ಟಿದ್ದರು. ಆ ವೇಳೆ ತಾಯಿಯ ಬಳಿಯಿದ್ದ ಮೊಬೈಲ್ ಸಿಕ್ಕಿರಲಿಲ್ಲ. 'ನಾನು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದೇನೆ. ನನ್ನ ತಾಯಿಯ ಬಳಿ ಇರುವ ಮೊಬೈಲ್‌ವೊಂದೇ ನನಗೆ ನೆನಪು. ಆ ಮೊಬೈಲನ್ನು ಹುಡುಕಿಕೊಡಿ ಎಂದು ಡಿಸಿ, ಶಾಸಕರಿಗೆ ಮಗಳು ಬಹಿರಂಗ ಪತ್ರ ಬರೆದಿದ್ದಾಳೆ. 

ಲಾಕ್‌ಡೌನ್‌ನಿಂದ ಪಾಸಿಟಿವಿಟಿ ದರ ಅರ್ಧಕ್ಕರ್ಧ ಇಳಿಕೆ, ಸಾವಿನ ಸಂಖ್ಯೆಯೂ ಇಳಿಕೆ