ಡಿಸಿಎಂ ಡಿಕೆ ಶಿವಕುಮಾರ್ ಸಿಬಿಐ ತನಿಖೆ ಭವಿಷ್ಯ ಏನಾಗುತ್ತೆ? ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ
ಕಾಜಿ ಲೆಂಡಪ್ ಡೋರ್ಜಿ ಪ್ರಕರಣ ಉಲ್ಲೇಖಿಸಿ ಅರ್ಜಿ ಸಲ್ಲಿಕೆ
ಅನುಮತಿ ಹಿಂಪಡೆಯುವ ಅಧಿಕಾರ ಇಲ್ಲ ಎಂದು ಉಲ್ಲೇಖ
ಕರ್ನಾಟಕ ಸರ್ಕಾರದ ಕ್ರಮ ಕಾನೂನು ಬಾಹಿರ ಎಂದು ಅರ್ಜಿ
ಡಿಸಿಎಂ ಡಿ.ಕೆ. ಶಿವಕುಮಾರ್(D.K.Shivakumar) ಸಿಬಿಐ ತನಿಖೆಗೆ ಸಂಬಂಧಿಸಿದಂತೆ, ಬಿಜೆಪಿ ಶಾಸಕ ಯತ್ನಾಳ್(Basanagouda Patil Yatnal) ಸಲ್ಲಿಸಿದ್ದ ಪಿಐಎಲ್ ಇಂದು ವಿಚಾರಣೆ ನಡೆಯಲಿದೆ. ಸಿಬಿಐ(CBI) ತನಿಖೆ ಅನುಮತಿ ವಾಪಸ್ ನಿರ್ಧಾರ ಪ್ರಶ್ನಿಸಿ ಪಿಐಎಲ್(PIL) ಸಲ್ಲಿಸಲಾಗಿತ್ತು. ಹೈಕೋರ್ಟ್(Highcourt) ಏಕಸದಸ್ಯ ಪೀಠದಲ್ಲಿ ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಲಿದೆ. ಸರ್ಕಾರದ ಒಪ್ಪಿಗೆ ಹಿಂಪಡೆದ ಆದೇಶ ರದ್ದುಪಡಿಸುವಂತೆ ಯತ್ನಾಳ್ ಅರ್ಜಿ ಸಲ್ಲಿಸಿದ್ದರು. ಡಿಕೆಶಿ ವಿರುದ್ಧ ತನಿಖೆ ಮುಂದುವರೆಸಲು ಸೂಚಿಸುವಂತೆ ಮನವಿ ಮಾಡಲಾಗಿದೆ. ಕಾಜಿ ಲೆಂಡಪ್ ಡೋರ್ಜಿ ಪ್ರಕರಣ ಉಲ್ಲೇಖಿಸಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಅನುಮತಿ ಹಿಂಪಡೆಯುವ ಅಧಿಕಾರ ಇಲ್ಲ ಎಂದು ಉಲ್ಲೇಖಿಸಲಾಗಿದೆ. ಕರ್ನಾಟಕ ಸರ್ಕಾರದ ಕ್ರಮ ಕಾನೂನು ಬಾಹಿರ ಎಂದು ಅರ್ಜಿಯಲ್ಲಿ ನಮೂದಿಸಲಾಗಿದೆ.
ಇದನ್ನೂ ವೀಕ್ಷಿಸಿ: 2024ರ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಗೆಲುವು..? ಸತತ 3ನೇ ಬಾರಿಗೆ ಗೆದ್ದು ಪ್ರಧಾನಿಯಾಗ್ತಾರಾ ಮೋದಿ..?