2024ರ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಗೆಲುವು..? ಸತತ 3ನೇ ಬಾರಿಗೆ ಗೆದ್ದು ಪ್ರಧಾನಿಯಾಗ್ತಾರಾ ಮೋದಿ..?

ಏನು ಹೇಳ್ತಿದೆ ಟೈಮ್ಸ್ ನೌ ವಾಹಿನಿಯ ಸಮೀಕ್ಷೆ..?
ಬಿಜೆಪಿ 20 ಸ್ಥಾನಗಳನ್ನು ದಾಟಲಿದೆ ಎನ್ನುತ್ತಿದೆ ಸಮಿಕ್ಷೆ
ಸಮೀಕ್ಷೆ ಪ್ರಕಾರ ಎರಡಂಕೆಯನ್ನು ಮುಟ್ಟಲ್ಲ ಕಾಂಗ್ರೆಸ್ 

Share this Video
  • FB
  • Linkdin
  • Whatsapp

ಲೋಕಸಭಾ ಚುನಾವಣೆ 2024ಕ್ಕೆ(Lok Sabha Elections 2024) ಸಂಬಂಧಿಸಿದಂತೆ ಟೈಮ್ಸ್‌ ನೌ ವಾಹಿನಿಯ(Times Now channel) ಸಮೀಕ್ಷೆ ಹೊರಬಂದಿದೆ. ಪಂಚರಾಜ್ಯ ಚುನಾವಣೆ ನಂತರ ಬಂದ ಮೊಟ್ಟ ಮೊದಲ ಸಮೀಕ್ಷೆ ಇದಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಗೆಲುವು..? ಮೋದಿ ಗೆಲುವಿನ ಓಟಕ್ಕೆ ತಡೆಯಾಗುತ್ತಾ I.N.D.I.A ಮೈತ್ರಿ..? ಎಂಬ ಹಲವು ಪ್ರಶ್ನೆಗಳು ಕಾಡುತ್ತಿವೆ. ಚುನಾವಣಾ ಪೂರ್ವ ಸಮೀಕ್ಷೆ ಹೊರಬಂದಿದ್ದು, ಎನ್‌ಡಿಎಗೆ(NDA) ಭಾರೀ ಬಹುಮತ ಎಂದು ಹೇಳಲಾಗುತ್ತಿದೆ. ಎನ್‌ಡಿಎಗೆ 319 ರಿಂದ 339 ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಿದೆ. I.N.D.I.A ಮೈತ್ರಿಕೂಟಕ್ಕೆ 148 ರಿಂದ 168 ಸ್ಥಾನ ಮಾತ್ರ ಸಿಗಲಿದೆಯಂತೆ. ಇನ್ನೂ ಕರ್ನಾಟಕದಲ್ಲಿ(Karnataka) ಬಿಜೆಪಿ(BJP) 20 ಸ್ಥಾನಗಳನ್ನು ದಾಟಲಿದೆ ಎನ್ನಲಾಗ್ತಿದೆ. ಸಮೀಕ್ಷೆ ಪ್ರಕಾರ, ಕಾಂಗ್ರೆಸ್‌ ಎರಡಂಕಿಯನ್ನು ದಾಟಲ್ವಂತೆ.

ಇದನ್ನೂ ವೀಕ್ಷಿಸಿ: ಸ್ಮೋಕ್ ಬಾಂಬ್ ಹಿಂದಿನ ಮಾಸ್ಟರ್ ಮೈಂಡ್ ಯಾರು..? ಆರು ಆರೋಪಿಗಳ ವಿರುದ್ಧ UAPA ಕಾಯ್ದೆಯಡಿ ಕೇಸ್!

Related Video