ರಾಹುಲ್ ಗಾಂಧಿಯದ್ದು ಹಿಂದೂ ವಿರೋಧಿ ನೀತಿ, ಆತ ದೊಡ್ಡ ಹುಚ್ಚ ಅನ್ನೋದು ಸ್ಪಷ್ಟ: ಶಾಸಕ ಭರತ್ ಶೆಟ್ಟಿ ವಾಗ್ದಾಳಿ

‘ರಾಹುಲ್ ಗಾಂಧಿಗೆ ಕೆನ್ನೆಗೆ ಬಾರಿಸಬೇಕಿತ್ತು ಅನ್ನಿಸ್ತಿದೆ’
‘ಹಿಂದೂಗಳ ಬಗ್ಗೆ ರಾಹುಲ್ ಗಾಂಧಿ ಟೀಕೆ ಮಾಡಿದ್ದಾನೆ’ 
ಮಂಗಳೂರಿನಲ್ಲಿ ಏಕವಚನದಲ್ಲೇ ಭರತ್ ಶೆಟ್ಟಿ ವಾಗ್ದಾಳಿ

First Published Jul 8, 2024, 5:59 PM IST | Last Updated Jul 8, 2024, 5:59 PM IST

ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸ್ತಿದೆ ಎಂದು ಮಂಗಳೂರು ಬಿಜೆಪಿ ಪ್ರತಿಭಟನೆಯಲ್ಲಿ(BJP Protest) ಶಾಸಕ ಡಾ.ವೈ.ಭರತ್ ಶೆಟ್ಟಿ (MLA Bharat Shetty) ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ರಾಹುಲ್ ಗಾಂಧಿಗೆ(Rahul Gandhi) ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸ್ತಿದೆ. ಆಗ ಇದಕ್ಕೆ ಏಳೆಂಟು ಎಫ್ಐಆರ್‌ ಆಗ್ತಿತ್ತು ಅಷ್ಟೇ, ರಾಹುಲ್ ಗಾಂಧಿ ಶಿವನ ಫೋಟೋ(Shiva Photo) ಹಿಡಿದು ನಿಂತಿದ್ದ, ಈ ಹುಚ್ಚನಿಗೆ ಶಿವ ಮೂರನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗ್ತಾನೆ ಅಂತ ಗೊತ್ತಿಲ್. ಅವನು ಹಿಂದೂ ವಿರೋಧಿ ನೀತಿಯನ್ನ ಅಳವಡಿಸಿಕೊಂಡಿದ್ದಾನೆ. ನಾವು ಅವನಿಗೆ ಯಾವ ಶಬ್ದ ಪ್ರಯೋಗಿಸಬಹುದು ಅಂತ ನೋಡಿ ಎಂದಿದ್ದಾರೆ. ರಾಹುಲ್ ಗಾಂಧಿ ಒಬ್ಬ ದೊಡ್ಡ ಹುಚ್ಚ ಅನ್ನೋದು ಸ್ಪಷ್ಟವಾಗಿದೆ. ಹಿಂದೂಗಳ(Hindus) ಬಗ್ಗೆ ಏನು ಮಾತನಾಡಿದ್ರೂ ಕೇಳ್ತಾರೆ ಎಂಬ ಭಾವನೆ ರಾಹುಲ್ ಗಾಂಧಿಗೆ ಇರಬಹುದು. ಅವನು ಅಲ್ಲಿ ಬೊಗಳುವ ಸಂದರ್ಭ ಇಲ್ಲಿನ ಸ್ಥಳೀಯ ನಾಯಕರು ಬಾಲ ಬಿಚ್ಚಲು ಶುರು ಮಾಡಿದ್ದಾರೆ. ಪೇಜಾವರ ಸ್ವಾಮೀಜಿ ಹೇಳಿಕೆ ಕೊಟ್ಟಿದನ್ನು ವಿರೋಧಿಸಿ ಸ್ಥಳೀಯ ನಾಯಕರು ಹೇಳಿಕೆ ಕೊಟ್ಟಿದ್ದಾರೆ. ಹಿಂದೂ ಧರ್ಮವನ್ನು ಕಾಪಾಡೋದು ಮಠ, ಮಂದಿರ ನಮ್ಮ ಕರ್ತವ್ಯ. ಹಿಂದೂ ಮತ್ತು ಹಿಂದುತ್ವ ಬೇರೆ ಎಂಬ ಥಿಯೇರಿ ಹೇಳೋದಕ್ಕೆ ಇವರು ಶುರು ಮಾಡಿದ್ದಾರೆ. ಬಾಯಿಗೆ ಬಂದ ಹಾಗೆ ರಾಹುಲ್ ಗಾಂಧಿ ಬೊಗಳುತ್ತಿದ್ದಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. 

ಇದನ್ನೂ ವೀಕ್ಷಿಸಿ:  ಆ ಅಯೋಧ್ಯೆಗೂ.. ಈ ಗುಜರಾತ್‌ಗೂ ಏನು ನಂಟು..? ರಾಹುಲ್ ಗಾಂಧಿ ವಿಶ್ವಾಸದ ಹಿಂದಿದೆ ನಿಗೂಢ ರಹಸ್ಯ..!

Video Top Stories