ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಸಚಿವ, ಶಾಸಕರ ಭೇಟಿ: 'ಗುಡ್ಡ ಕುಸಿತ ಆಗುತ್ತೆ ಅಂತಾ ಮೊದಲೇ ಅಂದಾಜಿಸಲಾಗಿತ್ತು'

ಗುಡ್ಡ ಕುಸಿತ ಆಗುತ್ತೆ ಅಂತಾ ಮೊದಲೇ ಅಂದಾಜಿಸಲಾಗಿತ್ತು. ಐಅರ್‌ಬಿ ಸಂಸ್ಥೆ ವಿರುದ್ಧ ಎಫ್‌ಐಆರ್  ದಾಖಲಿಸಲಾಗಿದೆ ಎಂದು  ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಉತ್ತರಕನ್ನಡ: ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಸಚಿವ ಮಂಕಾಳು ವೈದ್ಯ (Minister Mankal Vaidya) ಮತ್ತು ಆಂಕೋಲ ಶಾಸಕ ಸತೀಶ್ ಸೈಲ್ (MLA Satish Sail) ಭೇಟಿ ನೀಡಿದ್ದಾರೆ. ಕ್ರೇನ್ ಮೂಲಕ ಗುಡ್ಡದ ಮೇಲ್ಭಾಗಕ್ಕೆ ತೆರಳಿ ಪರಿಶೀಲನೆ ನಡೆಸಲಾಗುತ್ತಿದೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು. ಗುಡ್ಡ ಕುಸಿತ (Hill collapse) ಆಗುತ್ತೆ ಅಂತಾ ಮೊದಲೇ ಅಂದಾಜಿಸಲಾಗಿತ್ತು. ಐಅರ್‌ಬಿ ಸಂಸ್ಥೆ ವಿರುದ್ಧ ಎಫ್‌ಐಆರ್(FIR) ದಾಖಲಿಸಲಾಗಿದೆ. ಐಆರ್‌ಬಿಯವರಿಗೆ ಅರಣ್ಯ ಇಲಾಖೆ 29 ವರ್ಷಕ್ಕೆ ಜಾಗ ಲೀಸ್ ನೀಡಿತ್ತು. 11 ವರ್ಷವಾದ್ರೂ ರಸ್ತೆ ಕಾಮಗಾರಿ ಮುಗಿದಿಲ್ಲ. ಐಆರ್‌ಬಿ ಕಾಮಗಾರಿಯ ವಿರುದ್ಧ ಈ ಹಿಂದೆ ಪ್ರತಿಭಟನೆ (Protest)ನಡೆಸಿದ್ವು ಎಂದು ಸಚಿವರು ಹೇಳಿದರು. ಘಟನಾ ಸ್ಥಳದಲ್ಲಿ ಜೆಸಿಬಿಗಳು ಹಾಗೂ ರೇಡಾರ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ.

ಇದನ್ನೂ ವೀಕ್ಷಿಸಿ: ಹೆಂಡತಿಗೆ ಮಚ್ಚಿನೇಟು ಬೀಳುವಾಗ್ಲೆ ತಂಗಾ 2 ಎಂಟ್ರಿ! 10 ತಿಂಗಳಲ್ಲಿ 9 ಕೇಸ್‌ಗಳನ್ನ ಪತ್ತೆ ಮಾಡಿರುವ ತುಂಗಾ 2!

Related Video