ಕರ್ನಾಟಕದ ಹಾಲು ಮಹಾರಾಷ್ಟ್ರದ ಪಾಲು: ಸೈಲೆಂಟಾಗಿ ಕರುನಾಡ ಗಡಿಗೆ ‘ಮಹಾ’ ಡೈರಿಗಳ ಎಂಟ್ರಿ !

ನಂದಿನಿ ಇದು ಕರ್ನಾಟಕದ ಅಸ್ಮಿತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೀಗ ಕರ್ನಾಟಕ ಗಡಿಯಲ್ಲಿ ನಡೆಯುತ್ತಿರೋ ಅದೊಂದು ಬೆಳವಣಿಗೆಯಿಂದ ನಂದಿನಿ ಪಾಲಿಗೆ ಕಂಟಕ ಎದುರಾಗುವ ಲಕ್ಷಣಗಳು ಕಾಣ್ತಿವೆ. ಸದ್ದೇ ಇಲ್ಲದೆ ವಿಜಯಪುರದ ಗಡಿ ಗ್ರಾಮಗಳಲ್ಲಿ ಮಹಾರಾಷ್ಟ್ರದ ಹಾಲಿನ ಡೇರಿಗಳು ಎಂಟ್ರಿಯಾಗಿವೆ. ರೈತರಿಗೆ ಹೆಚ್ಚಿನ ದರದ ಆಮೀಷ ತೋರಿಸಿ ಹಾಲು ಖರೀದಿಸಿ ಮಹಾರಾಷ್ಟ್ರಕ್ಕೆ ಕೊಂಡೊಯ್ತಿವೆ.

First Published Sep 12, 2023, 10:03 AM IST | Last Updated Sep 12, 2023, 10:03 AM IST

ನಂದಿನಿ ಕನ್ನಡಿಗರ ಲೋಕಲ್ ಬ್ರ್ಯಾಂಡ್.. ನಂದಿನಿ(Nandini milk) ಉಳಿವಿಗಾಗಿ ನಡೆಯುತ್ತಿರುವ ಹೋರಾಟ ಎಲ್ಲರಿಗೂ ಗೊತ್ತು. ಆದ್ರೆ ಗಡಿ ಜಿಲ್ಲೆ ವಿಜಯಪುರದಲ್ಲಿ(Vijayapura) ನಂದಿನಿಗೆ ಸಂಕಷ್ಟ ಎದುರಾಗುವ ಲಕ್ಷಣಗಳು ಕಾಣ್ತಿವೆ. ಯಾಕಂದ್ರೆ ವಿಜಯಪುರ ಜಿಲ್ಲೆಯ ಮಹಾರಾಷ್ಟ್ರ(Maharashtra) ಗಡಿಯಲ್ಲಿರುವ ಹಳ್ಳಿಗಳಿಗೆ ಮಹಾರಾಷ್ಟ್ರದ ಹಾಲಿನ ಡೈರಿಗಳು(milk dairies) ಎಂಟ್ರಿ ಕೊಟ್ಟಿವೆ. ಮಹಾರಾಷ್ಟ್ರದಿಂದ ಬಂದಿರೋ ಹಾಲಿನ ಡೈರಿಗಳು ನಮ್ಮ ರಾಜ್ಯದ ರೈತರು ಉತ್ಪಾದಿಸಿದ ಗುಣಮಟ್ಟದ ಹಾಲನ್ನ ಖರೀದಿಸಿ ಮಹಾರಾಷ್ಟ್ರಕ್ಕೆ ಕೊಂಡೊಯ್ತಿವೆ. ತಿಕೋಟ ತಾಲೂಕಿನ ಬಾಬಾನಗರ, ಕನಮಡಿ, ಅಳಗಿನಾಳ, ಸೇರಿದಂತೆ ಗಡಿ ಗ್ರಾಮಗಳಲ್ಲಿ ಮಹಾರಾಷ್ಟ್ರದ ಹಾಲಿನ ಡೈರಿಗಳು ಪ್ರಬಲವಾಗಿ ಬೆಳೆದು ನಿಂತಿವೆ. ಲೀಟರ್‌ ಹಾಲಿಗೆ ರೈತರಿಂದ 35 ರಿಂದ 40ರೂಪಾಯಿಗೆ ಖರೀದಿ ಮಾಡ್ತಿವೆ. ಫ್ಯಾಟ್‌ ಹೆಚ್ಚಿಗೆ ಇದ್ದಲ್ಲಿ ಲೀಟರ್ಗೆ 60 ರೂಪಾಯಿವರೆಗೂ ಹಣ ನೀಡ್ತಿವೆ. ಕೆಎಂಎಫ್ ರೈತರಿಗೆ ಲೀಟರ್ ಹಾಲಿಗೆ ಕೇವಲ 33 ರೂಪಾಯಿ ನೀಡ್ತಿದೆ. ಅದು 15 ದಿನಕ್ಕೊಮ್ಮೆ ರೈತರ ಅಕೌಂಟ್ಗೆ ಜಮೆ ಆಗುತ್ತೆ. ಆದ್ರೆ ಮಹಾರಾಷ್ಟ್ರ ಡೈರಿಗಳು ಆಯಾ ದಿನವೇ ರೈತರಿಗೆ ಹಣ ನೀಡ್ತಿವೆ. ಪ್ರೋತ್ಸಾಹ ಧನವಾಗಿ ನೀಡ್ತಿರೋ 5 ರೂ. 6 ತಿಂಗಳಿಗೊಮ್ಮೆ ರೈತರಿಗೆ ಜಮೆ ಯಾಗುತ್ತೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಮಹಾರಾಷ್ಟ್ರ ಡೈರಿಗಳು ರಾಜ್ಯದ ಗಡಿ ರೈತರನ್ನ ತಮ್ಮತ್ತ ಸೆಳೆಯುತ್ತಿವೆ. ಮಹಾರಾಷ್ಟ್ರ ಹಾಲಿನ ಡೈರಿಗಳ ಈ ನಡೆ ರಾಜ್ಯದ ಸ್ಥಳೀಯ ಹಾಲು ಒಕ್ಕೂಟಕ್ಕೆ ಆತಂಕ ಮೂಡಿಸಿದೆ.

ಇದನ್ನೂ ವೀಕ್ಷಿಸಿ:  ಕೋಟಿ ಖರ್ಚು ಮಾಡಿದ್ರೂ ವಾಸಕ್ಕೆ ಯೋಗ್ಯವಿಲ್ಲ..! ಕುಡಿಯೋಕೆ ನೀರಿಲ್ಲ..ಡ್ರೈನೇಜ್ ಮೊದಲೇ ಇಲ್ಲ..!

Video Top Stories