ಕೋಟಿ ಖರ್ಚು ಮಾಡಿದ್ರೂ ವಾಸಕ್ಕೆ ಯೋಗ್ಯವಿಲ್ಲ..! ಕುಡಿಯೋಕೆ ನೀರಿಲ್ಲ..ಡ್ರೈನೇಜ್ ಮೊದಲೇ ಇಲ್ಲ..!

ಅವು ಬಡವರಿಗಾಗಿ ನಿರ್ಮಿಸಿದ್ದ ಮನೆಗಳು.. ಆದ್ರೆ ನಿರ್ಮಾಣ ಮಾಡಿ ವರ್ಷಗಳೇ ಕಳೆದ್ರು ಈ ಮನೆಗಳು ಬಡವರ ಕೈ ಸೇರಿಲ್ಲ. ಕಟ್ಟಡ ನಿರ್ಮಾಣವಾಗಿದ್ರೂ ಮೂಲಭೂತ ಸೌಕರ್ಯದ ವ್ಯವಸ್ಥೆ ಇಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯವೋ.. ಅಥವಾ ಜನಪ್ರತಿನಿಧಿಗಳ ಉಡಾಫೆಯೋ ಗೊತ್ತಿಲ್ಲ. ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಮನೆ ಮಾತ್ರ ವಾಸ ಮಾಡೋರಿಲ್ಲದೆ ಬಣಗುಡ್ತಿವೆ.

First Published Sep 12, 2023, 9:46 AM IST | Last Updated Sep 12, 2023, 9:46 AM IST

ಸಾಲು ಸಾಲಾಗಿ ತಲೆ ಎತ್ತಿ ನಿಂತಿರೋ ಸಾವಿರಾರು ಮನೆಗಳು.. ದೂರದಿಂದ ನೋಡೋಕೆ ಭರ್ಜರಿಯಾಗಿ ಕಾಣೋ ಕಟ್ಟಡಗಳು.. ಆದ್ರೆ ಒಳಗೆ ಹೋಗಿ ನೋಡಿದ್ರೆ ಕಾಣೋದೆಲ್ಲ ಶೂನ್ಯ.. ಮೂಲಭೂತ ಸೌಕರ್ಯಗಳಿಲ್ಲ(Basic Facilities). ನೀರು, ಡ್ರೈನೇಜ್ ವ್ಯವಸ್ಥೆ ಇಲ್ಲ. ಈ ದೃಶ್ಯ ಕಂಡು ಬಂದಿದ್ದು ಬಳ್ಳಾರಿ (Ballari)ಹೊರವಲಯದ ಮುಂಡ್ರಗಿ ಲೇಔಟ್ನಲ್ಲಿ. ಮಹಾತ್ಮ ಗಾಂಧಿ ಟೌನ್ ಶಿಪ್ ಹೆಸರಿನ ಈ ಮನೆಗಳನ್ನು, 2013ರಿಂದ 18ರಲ್ಲಿ ಸಿದ್ದರಾಮಯ್ಯ ಸರ್ಕಾರ ಬಡವರಿಗೆ ನೀಡಿತ್ತು. ಕಡಿಮೆ ದರದಲ್ಲಿ ಅಂದಿನ ಉಸ್ತುವಾರಿ ಸಚಿವ ಸಂತೋಷ ಲಾಡ್ ಈ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ರು. ಆಗ ಸ್ವಲ್ಪ ಕೆಲಸವಾದ್ರೂ, ನಂತರ ಬಂದ ಬಿಜೆಪಿ ಸರ್ಕಾರದಲ್ಲಿ 5600 ಮನೆಗಳ ನಿರ್ಮಾಣಕ್ಕೆ ಕೈ ಹಾಕಲಾಗಿತ್ತು. ಇದರಲ್ಲಿ ಈಗ 1 ಸಾವಿರ ಮನೆ ಸಿದ್ಧಗೊಂಡಿದೆ. ಆದ್ರೆ ಮನೆಗಳು(Houses) ಮಾತ್ರ ಇನ್ನೂ ಹಂಚಿಕೆಯಾಗಿಲ್ಲ. ಇದಕ್ಕೆ ಕಾರಣ ಮನೆಗಳಿಗೆ ಮೂಲಭೂತ ಸೌಲಭ್ಯಗಳಾದ ನೀರು, ಚರಂಡಿ ಸೇರಿದಂತೆ ಟ್ರಾನ್ಸ್ಪೋರ್ಟ್ ವ್ಯವಸ್ಥೆ ಇಲ್ಲದೇ ಇರೋದು. ಬಿಜೆಪಿ(BJP) ಸರ್ಕಾರದ ಅಂತ್ಯ ಕಾಲದಲ್ಲಿ ಲಾಟರಿ(Lottery) ಮೂಲಕ ಕೆಲವು ಮನೆಗಳನ್ನ ಹಂಚಲಾಗಿತ್ತು. ಮನೆಗಳಿಗೆ ಮೂಲಭೂತ ಸೌಕರ್ಯ ಇಲ್ಲ ಅನ್ನೋ ಕಾರಣಕ್ಕೆ ಮನೆ ಪಡೆದ ಬಹುತೇಕರು ಹಣ ಕಟ್ಟಿಲ್ಲ. ಆದ್ರೆ ಈ ಮನೆಗಳ ವಿಚಾರದಲ್ಲೂ ರಾಜಕೀಯ ತಲೆದೂರಿದ್ದು, ಬಿಜೆಪಿ ಸರ್ಕಾರ ತನ್ನ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಮನೆ ನೀಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ಸಿಟ್ಟಾದ ಸೋಮಶೇಖರ ರೆಡ್ಡಿ ಆ ರೀತಿ ಒಂದು ಮನೆ ಹಂಚಿಕೆಯಾದ್ರೂ ತೋರಿಸಿ ಎಂದು ಸವಾಲು ಹಾಕಿದ್ದಾರೆ.

 ಇದನ್ನೂ ವೀಕ್ಷಿಸಿ:  ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿ ವಿಸ್ತರಣೆ: ತಾಲೂಕಿನ 28 ಗ್ರಾಮಗಳಿಗೆ ಬುಡಾ ನೋಟಿಸ್ !