BIG 3 ; ಅನಾಥ ವೃದ್ಧರ ಪಾಲಿಗೆ ಮಗನಾದ ರತೀಶ್ ರಲದೇವ್: ಆಧುನಿಕ ಶ್ರವಣ ಕುಮಾರಗೆ ಸಲಾಂ
ಅನಾಥ ಆಶ್ರಮ ಆರಂಭಿಸಿ ವೃದ್ಧರಿಗೆ ಕಲಿಯುಗದ ಶ್ರವಣ ಕುಮಾರ ಆಗಿದ್ದಾರೆ ರತೀಶ್ ರಲದೇವ್ ದಂಪತಿ. ಇವರೇ ನಮ್ಮ ಇಂದಿನ ಬಿಗ್ 3 ಹೀರೋ
ಅನಾಥ ವೃದ್ಧರ ಮೇಲೆ ಆಗುವ ದೌರ್ಜನ್ಯ ಮತ್ತು ದಬ್ಬಾಳಿಕೆ ಕಡಿವಾಣ ಹಾಕಬೇಕೆಂದು ಕೈತುಂಬ ಸಂಬಳ ಇರುವ ಕೆಲಸ ಬಿಟ್ಟು, ಅನಾಥ ಆಶ್ರಮ ಆರಂಭಿಸಿ ಅನಾಥ ವೃದ್ಧರಿಗೆ ಕಲಿಯುಗದ ಶ್ರವಣ ಕುಮಾರ ಆಗಿದ್ದಾರೆ ರತೀಶ್ ರಲದೇವ್ ದಂಪತಿ. ಇವರು ಪೂರ್ವಜರು ಬಾಂಗ್ಲಾ ದೇಶದವರು. ದೇಶ ಇಬ್ಭಾಗವಾದಾಗ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಆರ್.ಹೆಚ್ ಕ್ಯಾಂಪ್'ಗೆ ಬಂದು ನೆಲೆಸಿದರು. ರತೀಶ್ ರಲದೇವ್ ಸಿಂಧನೂರಿಗೆ ಬಂದ ಬಳಿಕ ಇಲ್ಲಿಯೇ ಸಿವಿಲ್ ಇಂಜಿಯರ್ ಆಗಿ ಹೈದ್ರಾಬಾದ್, ಮುಂಬೈ ಕೆಲಸ ಮಾಡಿ ಕತಾರ್ ದೇಶದಲ್ಲಿ ಕೆಲಸಕ್ಕೆ ಸೇರಿದ್ರು. ತಿಂಗಳಿಗೆ ಈ 2 ಲಕ್ಷ 70 ಸಾವಿರ ರೂಪಾಯಿ ಸಂಬಳ ಬರುತ್ತಿತ್ತು. ಆದ್ರೂ ಆ ಕೆಲಸಕ್ಕೆ ಗುಡ್ ಬೈ ಹೇಳಿ, ಸಿಂಧನೂರಿಗೆ ಬಂದು ರತೀಶ್ ರಲದೇವ್ ತನ್ನ ದುಡಿಮೆಯ ಹಣದಲ್ಲಿ 8 ಎಕರೆ ಭೂಮಿ ಖರೀದಿ ಮಾಡಿ ಸಾಯಿರಾಂ ವೃದ್ಧಾಶ್ರಮ ಆರಂಭಿಸಿದ್ದಾರೆ.