Asianet Suvarna News Asianet Suvarna News

Big3 ಸ್ಮಶಾನದಲ್ಲೇ‌ ವಾಸ ಮಾಡುವ ಗಟ್ಟಿಗಿತ್ತಿ: ಹೆಣ ಹೂಳುವ ಕೆಲಸ ಮಾಡುವ ನೀಲಮ್ಮ

ಸ್ಮಶಾನದ ಗೋರಿಗಳ ನಡುವೆ ಒಬ್ಬರೇ ನಿಂತು ಶವದ ಗುಂಡಿ ಅಗೆಯುವ ನೀಲಮ್ಮ, ಯಾವ ಪುರುಷನಿಗಿಂತ ಕಮ್ಮಿ ಇಲ್ಲ. ಇವರೇ ನಮ್ಮ ಇವತ್ತಿನ ಬಿಗ್ 3 ಹೀರೋ. 
 

ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಲಿಂಗಾಯಿತರ ರುದ್ರಭೂಮಿಯಲ್ಲಿ ನೀಲಮ್ಮ ಹೆಣ ಹೂಳುವ ಕೆಲಸ ಮಾಡುತ್ತಿದ್ದು, ಕಳೆದ 24 ವರ್ಷಗಳಿಂದ‌ ಸ್ಮಶಾನದಲ್ಲೇ‌ ವಾಸ ಮಾಡುತ್ತಿದ್ದಾರೆ. ಇಲ್ಲಿವರೆಗೆ ಸರಿ ಸುಮಾರು 5 ಸಾವಿರಕ್ಕೂ ಹೆಚ್ಚು ಶವಗಳಿಗೆ ಗುಂಡಿ ತೋಡಿ ಸೈ ಎನಿಸಿಕೊಂಡಿದ್ದಾರೆ. ಮೊದಲಿನಿಂದಲೂ ನೀಲಮ್ಮ ಪತಿ ಹೆಣ ಹೂಳುವ ಕೆಲಸ ಮಾಡುತ್ತಿದ್ದರು. 1999ರಲ್ಲಿ ಪತಿಯೊಟ್ಟಿಗೆ ನೀಲಮ್ಮ ಕೂಡ ಇದೇ ರುದ್ರಭೂಮಿಗೆ ಬಂದು ವಾಸ ಮಾಡಲು ಶುರು ಮಾಡಿದ್ದಾರೆ. 2005ರಲ್ಲಿ ಪತಿ ತೀರಿಕೊಂಡ ನಂತರ ಎದೆ ಗುಂದದ ನೀಲಮ್ಮ ಹೆಣಗಳಿಗೆ ಗುಂಡಿ ತೆಗೆಯುವ ಕಾರ್ಯವನ್ನ ತಾವೆ ಮಾಡ್ತಿದ್ದಾರೆ. ನೀಲಮ್ಮ ಬರೀ ಶವಗಳಿಗೆ ಗುಂಡಿ ಅಗೆಯುವ ಕೆಲಸ ಮಾತ್ರ ಮಾಡೋದಲ್ಲದೇ ಜೊತೆಗೆ ದೇಹದಾನದ ಮೂಲಕವು ಮಾದರಿ ಆಗಿದ್ದಾರೆ. ನಾನು ಹರಿಶ್ಚಂದ್ರನ ಬಳಿ ಸಾಲ ಪಡೆದಿರಬಹುದು. ಹೀಗಾಗಿ ಬದುಕಿರುವವರೆಗೂ ಈ ಕೆಲಸ ಮುಂದುವರೆಸಿಕೊಂಡು ಹೋಗುತ್ತೇನೆ. ಆದರೆ ಸತ್ತ ನಂತರ ನನ್ನ ದೇಹವನ್ನು ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ದೇಹದಾನ ಮಾಡಿದ್ದೇನೆ ಎನ್ನುತ್ತಾರೆ. ಇಳಿ ವಯಸ್ಸಿನಲ್ಲೂ ಬತ್ತದ ಇವರ ಉತ್ಸಾಹ ನಿಜಕ್ಕೂ ಎಲ್ಲರಿಗೂ ಮಾದರಿ. ಈಗಾಗಿಯೇ ಇವರು ಇಂದಿನ ನಮ್ಮ ಬಿಗ್-3 ಹೀರೋ ಆಗಿ ನಿಮ್ಮ ಮುಂದಿದ್ದಾರೆ.

Video Top Stories