ದೇವರಿಗೆ ಬಲಿ ಕೊಟ್ಟ ಕೋಣದ ಮಾಂಸ ತಿನ್ನದಿದ್ರೆ ದಲಿತರಿಗೆ ಬಹಿಷ್ಕಾರ ?
ಯಾದಗಿರಿಯ ದೇವಿಕೇರಾ ಗ್ರಾಮದಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿದ್ದು, ದೇವರಿಗೆ ಬಲಿಕೊಟ್ಟ ಕೋಣದ ಮಾಂಸ ತಿನ್ನದಿದ್ರೆ ದಲಿತರಿಗೆ ಬಹಿಷ್ಕಾರ ಹಾಕಲಾಗುತ್ತಂತೆ.
ಯಾದಗಿರಿಯಲ್ಲಿ ಇನ್ನೂ ಅನಿಷ್ಟ ಪದ್ಧತಿ ಜೀವಂತವಾಗಿದ್ದು, ದೇವರಿಗೆ ಬಲಿ ಕೊಟ್ಟ ಕೋಣದ ಮಾಂಸ ತಿನ್ನದಿದ್ರೆ ದಲಿತರಿಗೆ(Dalits) ಬಹಿಷ್ಕಾರ ಹಾಕಲಾಗುತ್ತದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ದೇವರ(God) ಬಲಿಯನ್ನು ವಿರೋಧಿಸಿದ್ರೆ, ಗ್ರಾಮಕ್ಕೆ ಪ್ರವೇಶ ಇರುವುದಿಲ್ಲವಂತೆ. ಯಾದಗಿರಿಯ(yadgir) ದೇವಿಕೇರಾ ಜಾತ್ರೆಯಲ್ಲಿ(Fair) ಈಗಲೂ ಈ ಅನಿಷ್ಠ ಪದ್ಧತಿ ಜೀವಂತವಾಗಿದೆ. ಡಿಸೆಂಬರ್ 18ರಂದು ಎರಡು ದಿನ ದೇವಿಕೇರಾ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರೆ ನಡೆಯುತ್ತದೆ. ಅಲ್ಲದೇ ಪ್ರಾಣಿ ಬಲಿ ವಿರೋಧಿಸಿ ಡಿಸಿ, ಎಸ್‌ಪಿ, ಸಿಒಗೆ ದಲಿತ ಸಮುದಾಯದಿಂದ ದೂರು ನೀಡಲಾಗಿದೆ. ದೇವಿಕೇರಾ ಗ್ರಾಮದಲ್ಲಿ ದ್ಯಾಮವ್ವ, ಮರೆಮ್ಮ, ಪಾಲ್ಕಮ್ಮ ಜಾತ್ರೆ ನಡೆಯುತ್ತದೆ.
ಇದನ್ನೂ ವೀಕ್ಷಿಸಿ: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳು ಇನ್ನೂ ನಾಪತ್ತೆ: ವಾಟ್ಸಾಪ್, ಕರೆ ಮಾಡಿ ಮಾಹಿತಿ ನೀಡಲು ಎನ್‌ಐಎ ಮನವಿ