Asianet Suvarna News Asianet Suvarna News

ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿಗಳು ಇನ್ನೂ ನಾಪತ್ತೆ: ವಾಟ್ಸಾಪ್, ಕರೆ ಮಾಡಿ ಮಾಹಿತಿ ನೀಡಲು ಎನ್‌ಐಎ ಮನವಿ

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಐವರು ಆರೋಪಿಗಳು ಇನ್ನೂ ನಾಪತ್ತೆಯಾಗಿದ್ದು, ಕರ್ನಾಟಕದ ಐವರು ಸೇರಿ 24 ಮಂದಿ ಆರೋಪಿಗಳ ಲಿಸ್ಟ್‌ನನ್ನು ಎನ್‌ಐಎ ಪ್ರಕಟ ಮಾಡಿದೆ.  

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ(Praveen Nettaru murder case) ಐವರು ಆರೋಪಿಗಳು ಇನ್ನೂ ನಾಪತ್ತೆಯಾಗಿದ್ದಾರೆ. ಪ್ರಕರಣದ ಐವರ ಹೆಸರು ಪ್ರಕಟ ಮಾಡಿದ್ದು, ಆರೋಪಿಗಳ ಸುಳಿವು ನೀಡಲು NIA ಮನವಿ ಮಾಡಿದೆ. ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ವಾಂಟೆಡ್‌ ಲಿಸ್ಟ್ ಬಿಡುಗಡೆಯಾಗಿದೆ. ನಿಷೇಧಿತ ಪಿಎಫ್ಐ(PFI) ಪ್ರಕರಣಗಳಲ್ಲಿ ಈ ಆರೋಪಿಗಳು ನಾಪತ್ತೆಯಾಗಿದ್ದಾರೆ. ಕರ್ನಾಟಕದ(Karnataka) ಐವರು ಸೇರಿ 24 ಮಂದಿ ಆರೋಪಿಗಳ ಲಿಸ್ಟ್‌ ಪ್ರಕಟ ಮಾಡಲಾಗಿದೆ. ಇದರಲ್ಲಿ ಆಂಧ್ರ ಹಾಗೂ ತೆಲಂಗಾಣದ ಮೂವರು ಇದ್ದಾರೆ. ಕೇರಳದ 11, ತಮಿಳುನಾಡಿನ ಐವರು ನಾಪತ್ತೆ ಆಗಿದ್ದಾರೆ. ಪಿಎಫ್ಐ ಪ್ರಕರಣಗಳಲ್ಲದೆ ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ. PFI ಬ್ಯಾನ್ ಬಳಿಕ ತಲೆಮರೆಸಿಕೊಂಡ ಆರೋಪಿಗಳು. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಎನ್ಐಎಗೆ ಮಾಹಿತಿ ನೀಡುವಂತೆ ಮನವಿ‌ ಮಾಡಲಾಗಿದೆ. ವಾಟ್ಸಾಪ್ ಅಥವಾ ಕರೆ ಮಾಡಿ ಮಾಹಿತಿ ನೀಡಲು ಮನವಿ ಮಾಡಲಾಗಿದೆ. ಆರೋಪಿಗಳ ಫೋಟೋ, ವಿಳಾಸ ಸಮೇತ ಮಾಹಿತಿ ಪ್ರಕಟ ಮಾಡಲಾಗಿದೆ. ಬೆಳ್ಳಾರೆ ಮುಸ್ತಫಾ, ಮಸೂಧ್ ಅಗ್ನಾಡಿ, ಮೊಹಮ್ಮದ್ ಷರೀಫ್ ಕೊಡಾಜೆ, ಉಮ್ಮರ್ ಅಲಿಯಾಸ್ ಉಮರ್ ಪಾರೂಕ್, ಅಬೂಬ್ಬಕ್ಕರ್ ಸಿದ್ದಿಕ್ ಇನ್ನೂ ನಾಪತ್ತೆಯಾಗಿದ್ದಾರೆ. ಕುಂಭಕೋಣಂ ರಾಮಲಿಂಗಂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ತಮಿಳುನಾಡಿನ ಐವರು. ಪಾಲಕ್ಕಾಡ್ ಶ್ರೀನಿವಾಸ್ ಎಂಬಾತನ  ಪ್ರಕರಣದಲ್ಲಿ ಭಾಗಿಯಾಗಿದ್ದ ಕೇರಳದ ನಾಲ್ವರು ಆರೋಪಿಗಳು. ಅಬ್ದುಲ್ ವಹಾಬ್, ಅಬ್ದುಲ್ ರಷೀದ್‌, ಆಯೂಬ್ ಹಾಗೂ ಮತ್ತೊರ್ವನಿಂದ ಕೊಲೆ. ಪಿಎಫ್ಐಗೆ ನೇಮಕ, ಒಳಸಂಚು, ಸರ್ಕಾರದ ವಿರುದ್ಧ ಪಿತೂರಿ, ದೇಶದ ಸಮಗ್ರತೆ, ಏಕತೆಗೆ ದಕ್ಕೆ ತರಲು ಯತ್ನಿಸಿದ ಆರೋಪ. ತಲೆಮರೆಸಿಕೊಂಡಿರುವ ಆರೋಪಿಗಳ ಮಾಹಿತಿಯನ್ನು ಎನ್ಐಎ ಕಲೆ ಹಾಕುತ್ತಿದೆ.

ಇದನ್ನೂ ವೀಕ್ಷಿಸಿ:  ಚಿನ್ನದ ವ್ಯಾಪಾರಿಗಳ ಮನೆಯಲ್ಲಿ ಐಟಿ ತಲಾಶ್‌: 7 ಜ್ಯುವೆಲ್ಲರಿ ಶಾಪ್‌ಗಳಲ್ಲಿ ಸಿಕ್ಕಿದ್ದೆಷ್ಟು ?