ಡ್ಯೂಟಿ ವೇಳೆ ಮಂಗಳೂರು ಪೊಲೀಸರ ಎಣ್ಣೆ ಪಾರ್ಟಿ!
ಬಾರ್ ಹೊರಗೆ ಸರಕಾರಿ ಟಿ.ಟಿ ವಾಹನ ನಿಲ್ಲಿಸಿ ಪಾರ್ಟಿ ಆರೋಪ| ಊಟಕ್ಕೆ ಹೋಗಿದ್ದ ವೇಳೆ ಮದ್ಯಪಾನ| ಎಂಟು ಸಿಸಿಬಿ ಪೊಲೀಸರನ್ನು ವಿಚಾರಣೆಗೆ ಹಾಜರಾಗಲು ಸೂಚಿಸಿದ ಡಿಸಿಪಿ ಹರಿರಾಂ ಶಂಕರ್| ವಿಡಿಯೋದ ಆಧಾರದಲ್ಲಿ ತನಿಖೆ|
ಮಂಗಳೂರು(ಜ.30): ಕರ್ತವ್ಯದ ವೇಳೆ ಮಂಗಳೂರು ಸಿಸಿಬಿ ಪೊಲೀಸರ ಎಣ್ಣೆ ಪಾರ್ಟಿ ಮಾಡಿದ ವಿಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಂಗಳೂರು ಕಮಿಷನರ್ ಶಶಿಕುಮಾರ್ ತನಿಖೆಗೆ ಆದೇಶಿಸಿದ್ದಾರೆ.
ಒಂದು ಮಗುವಿಗಾಗಿ ಏನ್ ಆಗ್ಬಾರ್ದು ಆಗಿತ್ತೋ ಅದೆಲ್ಲಾ ಆಗೋಯ್ತು...
ಮಂಗಳೂರು ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ನಗರದ ಹೊರವಲಯದ ಕುತ್ತಾರು ಬಳಿಯ ಬಾರ್‌ನಲ್ಲಿ ಕರ್ತವ್ಯದ ವೇಳೆ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯ ಜೊತೆಯಲ್ಲೇ ಎಣ್ಣೆ ಪಾರ್ಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಂಗಳೂರು ಸಿಸಿಬಿಯ ಎಂಟು ಮಂದಿ ಸಿಬ್ಬಂದಿಯಿಂದ ಪಾರ್ಟಿ ಆರೋಪ ಕೇಳಿಬಂದಿದೆ.