Asianet Suvarna News Asianet Suvarna News

ಮಂಗಳೂರು: ಕರಾವಳಿಯಲ್ಲಿ ಮತ್ತೆ ಲವ್‌ ಜಿಹಾದ್‌ ಸದ್ದು..!

ಕರಾವಳಿಯಲ್ಲಿ ಮತ್ತೆ ಸದ್ದು ಮಾಡುತ್ತಿರುವ ಲವ್ ಜಿಹಾದ್| ಕಡಲ ತಡಿಯಲ್ಲಿ ಒಂದೇ ತಿಂಗಳ ಅಂತರದಲ್ಲಿ ಮುನ್ನೆಲೆಗೆ ಬಂದ ನಾಲ್ಕು ಲವ್ ಜಿಹಾದ್ ಪ್ರಕರಣ| ಸ್ವಾಮೀಜಿಯೊಬ್ಬರ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದ ಹತ್ತಾರು ಲವ್ ಜಿಹಾದ್ ಪ್ರಕರಣಗಳು|

ಮಂಗಳೂರು(ನ.22): ಕರಾವಳಿಯಲ್ಲಿ ಕೇವಲ ಒಂದೇ ತಿಂಗಳ ಅವಧಿಯಲ್ಲಿ ನಾಲ್ಕು ಲವ್‌ ಜಿಹಾದ್‌ ಪ್ರಕರಣಗಳು ನಡೆದಿವೆ ಎಂದು ಹೇಳಲಾಗುತ್ತಿದೆ. ರಾಜಶೇಖರಾನಂದ ಸ್ವಾಮೀಜಿ ನೇತೃತ್ವದ ಹಿಂದೂ ಟಾಸ್ಕ್‌ ಪೋರ್ಸ್‌ ಸಮಿತಿ ಈ ಅರೋಪವನ್ನು ಮಾಡುತ್ತಿದೆ. ಟಾಸ್ಕ್‌ ಪೋರ್ಸ್‌ನಿಂದ ಒಂದೇ ವರ್ಷದಲ್ಲಿ 18 ಲವ್‌ ಜಿಹಾದ್‌ ಪ್ರಕರಣಳು ಪತ್ತೆಯಾಗಿವೆ.

ಪ್ರತಿಷ್ಠೆಗಾಗಿ ನಡೆಯುತ್ತಿದೆಯಾ ಕರ್ನಾಟಕ ಬಂದ್‌: ಸಂಘಟನೆಗಳಿಗೆ ಬೆದರಿಕೆ ಹಾಕಿದ್ರಾ ವಾಟಾಳ್‌..?

18 ರಲ್ಲಿ 14 ಕೇಸ್‌ಗಳನ್ನ ಟಾಸ್ಕ್‌ ಪೋರ್ಸ್‌ ಇತ್ಯರ್ಥ ಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿನ ದೂರು ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಫೇಸ್‌ಬುಕ್‌, ಟ್ವಿಟ್ಟರ್‌ ಹಾಗು ವಾಟ್ಸಾಪ್‌ ಆಧರಿಸಿ ಟಾಸ್ಕ್‌ ಪೋರ್ಸ್‌ ಕಾರ್ಯಾಚರಣೆಗಿಳಿದಿದೆ.  
 

Video Top Stories