Asianet Suvarna News Asianet Suvarna News

ಪ್ರತಿಷ್ಠೆಗಾಗಿ ನಡೆಯುತ್ತಿದೆಯಾ ಕರ್ನಾಟಕ ಬಂದ್‌: ಸಂಘಟನೆಗಳಿಗೆ ಬೆದರಿಕೆ ಹಾಕಿದ್ರಾ ವಾಟಾಳ್‌..?

ವಾಟಾಳ್‌ ನಾಗರಾಜ್‌ ಪ್ರತಿಷ್ಠೆಗಾಗಿ ನಡೆಯುತ್ತಿದೆಯಾ ಕರ್ನಾಟಕ ಬಂದ್‌?| ಬಂದ್‌ ವಿರುದ್ಧವಾಗಿ ನಿಂತ 150ಕ್ಕೂ ಹೆಚ್ಚು ಸಂಘಟನೆಗಳು| ಬಂದ್‌ಗೆ ಬೆಂಬಲಿಸದಿದ್ರೆ ಮಸಿ ಬಳಿಯೋದಾಗಿ ಬೆದರಿಕೆ| 

ಬೆಂಗಳೂರು(ನ.22): ಡಿ.5 ರಂದು ಕರ್ನಾಟಕ ಬಂದ್‌ ಹಿಂದೆ ನಿಜಕ್ಕೂ ಕನ್ನಡಪರ ಹಿತಾಸಕ್ತಿ ಇದೆಯಾ?, ವಾಟಾಳ್‌ ನಾಗರಾಜ್‌ ಪ್ರತಿಷ್ಠೆಗಾಗಿ ನಡೆಯುತ್ತಿದೆಯಾ ಕರ್ನಾಟಕ ಬಂದ್‌? ಎಂಬೆಲ್ಲ ಪ್ರಶ್ನೆಗಳು ಕಾಡಲಾರಂಭಿಸಿವೆ. ಹೌದು, ಇದಕ್ಕೆ ಇಂಬು ನೀಡುವಂತೆ 150ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ ವಿರುದ್ಧವಾಗಿ ನಿಂತಿವೆ. 

ಬೆಳಗಾವಿ ಬೈಎಲೆಕ್ಷನ್‌: ಬಿಜೆಪಿ ಟಿಕೆಟ್‌ಗಾಗಿ ಮುಸುಕಿನ ಗುದ್ದಾಟ..!

ಬಂದ್‌ ಯಶಸ್ಸಿಗೆ ಸಂಘಟನೆಗಳಿಗೆ ವಾಟಾಳ್‌ ನಾಹಗರಾಜ್‌ ಅವರು ಬೆದರಿಕೆ ಹಾಕಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಬಂದ್‌ಗೆ ಬೆಂಬಲಿಸದಿದ್ರೆ ಮಸಿ ಬಳಿಯೋದಾಗಿ ಸಂಘಟನೆಗಳುಗೆ ಮುಖ್ಯಸ್ಥರಿಗೆ ವಾಟಾಳ್‌ ನಾಗರಾಜ್‌ ಬೆಂಬಲಿಗರು ಬೆದರಿಕೆ ಹಾಕಿದ್ದಾರೆ ಎಂದು ಅರೋಪಿಸಲಾಗಿದೆ.