Asianet Suvarna News Asianet Suvarna News

Fisheries University Mangaluru : ಕಾಣದ ಕೈಗಳಿಂದ ಮೀನುಗಾರಿಕಾ ವಿವಿಗೆ ವಿಘ್ನ

ಅದು ಬರೋಬ್ಬರಿ 52 ವರ್ಷಗಳ ಇತಿಹಾಸವಿರೋ ಮೀನುಗಾರಿಕಾ ಕಾಲೇಜು. ಆಗ್ನೇಯಾ ಏಷಿಯಾದಲ್ಲೇ ಮೊಟ್ಟ ಮೊದಲ ಬಾರಿಗೆ ಮೀನುಗಾರಿಕೆ ವಿಭಾಗದಲ್ಲಿ ವೃತ್ತಿಪರ ಪದವಿ ಕಲಿಕೆಗಾಗಿ ಈ ಕಾಲೇಜು ಮಂಗಳೂರಲ್ಲಿ ಆರಂಭವಾಗಿತ್ತು. ಇಷ್ಟೊಂದು ದೊಡ್ಡ ಇತಿಹಾಸವಿರೊ ಈ ಕಾಲೇಜನ್ನ ವಿಶ್ವವಿದ್ಯಾನಿಲಯವಾಗಿ ಬದಲಿಸೋದಕ್ಕೆ ಮನವಿಗಳು ಬಂದ ಬೆನ್ನಲ್ಲೇ ಸರ್ಕಾರ ಕೂಡ ಅಸ್ತು ಅಂದಿತ್ತು. ಆದರೆ ಇದೀಗ ಕೆಲ ಕಾಣದ ಕೈಗಳ ಕುತಂತ್ರಕ್ಕೆ ಸರ್ಕಾರ ತನ್ನ ನಿಲುವು ಬದಲಿಸಿದ್ದು, ಸರ್ಕಾರದ ನಡೆಯ ವಿರುದ್ದ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ.  

ಮಂಗಳೂರು (ಡಿ.23):  ಅದು ಬರೋಬ್ಬರಿ 52 ವರ್ಷಗಳ ಇತಿಹಾಸವಿರೋ ಮೀನುಗಾರಿಕಾ ಕಾಲೇಜು (College). ಆಗ್ನೇಯಾ ಏಷಿಯಾದಲ್ಲೇ ಮೊಟ್ಟ ಮೊದಲ ಬಾರಿಗೆ ಮೀನುಗಾರಿಕೆ ವಿಭಾಗದಲ್ಲಿ ವೃತ್ತಿಪರ ಪದವಿ ಕಲಿಕೆಗಾಗಿ ಈ ಕಾಲೇಜು ಮಂಗಳೂರಲ್ಲಿ(Mangaluru) ಆರಂಭವಾಗಿತ್ತು. ಇಷ್ಟೊಂದು ದೊಡ್ಡ ಇತಿಹಾಸವಿರೊ ಈ ಕಾಲೇಜನ್ನ ವಿಶ್ವ ವಿದ್ಯಾನಿಲಯವಾಗಿ ಬದಲಿಸೋದಕ್ಕೆ ಮನವಿಗಳು ಬಂದ ಬೆನ್ನಲ್ಲೇ ಸರ್ಕಾರ (Govt) ಕೂಡ ಅಸ್ತು ಅಂದಿತ್ತು. ಆದರೆ ಇದೀಗ ಕೆಲ ಕಾಣದ ಕೈಗಳ ಕುತಂತ್ರಕ್ಕೆ ಸರ್ಕಾರ ತನ್ನ ನಿಲುವು ಬದಲಿಸಿದ್ದು, ಸರ್ಕಾರದ ನಡೆಯ ವಿರುದ್ದ ವಿದ್ಯಾರ್ಥಿಗಳು (Students) ಸಿಡಿದೆದ್ದಿದ್ದಾರೆ.  

ಗುಜರಾತ್‌ನಲ್ಲಿ ಪಾಕ್‌ ಮೀನುಗಾರಿಕಾ ಬೋಟ್‌ ವಶಕ್ಕೆ... 400 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ

ಇದೀಗ ಈ ನಿರ್ಧಾರ ಕೈ ಬಿಟ್ಟಿರೋ ಸರ್ಕಾರ ಮೀನುಗಾರಿಕಾ ವಿವಿಯ ಬದಲಾಗಿ ಕರ್ನಾಟಕ (Karnataka) ಮೀನುಗಾರಿಕಾ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ಸ್ವಯತ್ತ ಸಂಸ್ಥೆಯಾಗಿ ಕಾಲೇಜನ್ನ ‌ಬದಲಿಸಲು ಮುಂದಾಗಿದೆ. ಅಲ್ಲದೇ ಈ ಬಗ್ಗೆ ಆಡಳಿತಾತ್ಮಕ ಅನುಮೋದನೆ ನೀಡಿ, ಇದರ ಸಾಧಕ ಬಾಧಕ ಚರ್ಚಿಸಲು ಸಮಿತಿ ಕೂಡ ರಚಿಸಿದೆ. ಆದ್ರೆ ಮೀನುಗಾರಿಕಾ ವಿವಿಯ ಕನಸು ಕಂಡಿದ್ದ ವಿದ್ಯಾರ್ಥಿಗಳಿಗೆ ಸರ್ಕಾರದ ಈ ನಡೆ ಅಸಮಾಧಾನಕ್ಕೆ ಕಾರಣವಾಗಿದೆ.

Video Top Stories