ಗುಜರಾತ್‌ನಲ್ಲಿ ಪಾಕ್‌ ಮೀನುಗಾರಿಕಾ ಬೋಟ್‌ ವಶಕ್ಕೆ... 400 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ

ಗುಜರಾತ್ ಎಟಿಎಸ್‌ ಭಾರತೀಯ ಕೋಸ್ಟ್ ಗಾರ್ಡ್ ಜಂಟಿ ಕಾರ್ಯಾಚರಣೆ
400 ಕೋಟಿ ರೂಪಾಯಿ ಮೌಲ್ಯದ 77 ಕೆಜಿ ಹೆರಾಯಿನ್ ವಶಕ್ಕೆ
ಪಾಕಿಸ್ತಾನದ ಮೀನುಗಾರಿಕಾ ದೋಣಿ ಜಪ್ತಿ, ಆರು ಜನರ ಬಂಧನ

Gujarat ATS seized Pakistani fishing boat carrying drugs worth Rs 400 crore akb

ಅಹ್ಮದಾಬಾದ್‌(ಡಿ.20): 400 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನದ ಮೀನುಗಾರಿಕಾ ದೋಣಿಯನ್ನು ಗುಜರಾತ್ ಎಟಿಎಸ್ ಸೋಮವಾರ ಭಾರತೀಯ ಸಮುದ್ರ ತೀರದ ಜಲ ಪರಿಧಿಯಲ್ಲಿ ಭೇದಿಸಿದೆ. ದೋಣಿಯಲ್ಲಿದ್ದ ಕನಿಷ್ಠ ಆರು ಮಂದಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಗುಜರಾತ್‌ನ ರಕ್ಷಣಾ ಪಿಆರ್‌ಒ (PRO) ಪ್ರಕಾರ, ಭಾರತೀಯ ಕೋಸ್ಟ್ ಗಾರ್ಡ್ (Indian Coast Guard) ಗುಜರಾತ್ ಎಟಿಎಸ್‌ (Gujarat ATS) ನೊಂದಿಗೆ ಸೇರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ,  ಭಾರತೀಯ ಜಲಪ್ರದೇಶದಲ್ಲಿ ಸುಮಾರು 400 ಕೋಟಿ ರೂಪಾಯಿ ಮೌಲ್ಯದ 77 ಕೆಜಿ ಹೆರಾಯಿನ್ ಅನ್ನು ವಶಕ್ಕೆ ಪಡೆಯಲಾಗಿದೆ. 

ಜೊತೆಗೆ  'ಅಲ್ ಹುಸೇನಿ' (Al Huseini) ಎಂಬ ಪಾಕಿಸ್ತಾನಿ ಮೀನುಗಾರಿಕಾ ದೋಣಿಯನ್ನು ಜಪ್ತಿ ಮಾಡಿದ್ದು, ಅದರಲ್ಲಿದ್ದ  ಆರು ಸಿಬ್ಬಂದಿಯನ್ನು ಬಂಧಿಸಲಾಗಿದೆ. ಬಳಿಕ ಹೆಚ್ಚಿನ ತನಿಖೆಗಾಗಿ ದೋಣಿಯನ್ನು ಗುಜರಾತ್‌ನ ಕಚ್ (Kutch) ಜಿಲ್ಲೆಯ ಜಖೌ ಕರಾವಳಿ (Jakhau coast) ಗೆ ತರಲಾಗಿದೆ ಎಂದು ಅದು ಹೇಳಿದೆ. ಈ ವರ್ಷದ ಆರಂಭದಲ್ಲಿ ಏಪ್ರಿಲ್‌ನಲ್ಲಿ ಕೋಸ್ಟ್ ಗಾರ್ಡ್ ಮತ್ತು ಎಟಿಎಸ್ ಇದೇ ರೀತಿಯ ಕಾರ್ಯಾಚರಣೆ ನಡೆಸಿತ್ತು. ಆ ಸಂದರ್ಭದಲ್ಲಿ ಸುಮಾರು 150 ಕೋಟಿ ರೂಪಾಯಿ ಮೌಲ್ಯದ 30 ಕೆಜಿ ಹೆರಾಯಿನ್ ಸಾಗಿಸುತ್ತಿದ್ದ ಬೋಟ್ ಅನ್ನು ಕಚ್‌ನ ಜಖೌ ಕರಾವಳಿಯ ಬಳಿ ಭಾರತೀಯ ಸಮುದ್ರ ವ್ಯಾಪ್ತಿಯಲ್ಲಿ ಬಂಧಿಸಲಾಗಿತ್ತು. ಈ ವೇಳೆ ಎಂಟು ಪಾಕಿಸ್ತಾನಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿತ್ತು. 

Drive Against Drug Menace Bengaluru: ಹೊಸ ವರ್ಷಕ್ಕೆ ನಶೆ ಏರಿಸಲು ಡ್ರಗ್ಸ್ ತಂದವರ ಬಂಧನ!

ಬರೀ ಇಷ್ಟೇ ಅಲ್ಲ ಕಳೆದ ತಿಂಗಳು ಗುಜರಾತ್‌ನ ಮೊರ್ಬಿ (Morbi district) ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯಿಂದ ಸುಮಾರು 600 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಮಾದಕ ವಸ್ತುವನ್ನು ಎಟಿಎಸ್ ವಶಪಡಿಸಿಕೊಂಡಿತ್ತು. ಪಾಕಿಸ್ತಾನಿ ಡ್ರಗ್ ಡೀಲರ್‌ಗಳು ಅರೇಬಿಯನ್ ಸಮುದ್ರದ ಮೂಲಕ ತಮ್ಮ ಭಾರತೀಯ ಸಹವರ್ತಿಗಳಿಗೆ ಈ ಮಾದಕ ವಸ್ತುಗಳನ್ನು  ಕಳುಹಿಸಿದ್ದಾರೆ ಎಂದು ಗುಜರಾತ್‌ ಎಟಿಎಸ್ ಹೇಳಿದೆ. 

ಈ ವರ್ಷದ ಸೆಪ್ಟೆಂಬರ್‌ನಲ್ಲಿ, ಭಾರತದಲ್ಲಿನ ಅತಿದೊಡ್ಡ ಹೆರಾಯಿನ್ ಕಳ್ಳ  ಸಾಗಣೆ ಪ್ರಕರಣ ಪತ್ತೆಯಾಗಿತ್ತು. ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ಸುಮಾರು 3,000 ಕೆಜಿ ಡ್ರಗ್ ಅನ್ನು ವಶಪಡಿಸಿಕೊಂಡಿದೆ. ಇದು ಅಫ್ಘಾನಿಸ್ತಾನದಿಂದ ಬಂದಿದೆ ಎಂದು ನಂಬಲಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಇದರ ಮೌಲ್ಯ 21,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಕಚ್‌ನ ಮುಂದ್ರಾ ಬಂದರಿನಲ್ಲಿ ( Mundra port)ಎರಡು ಕಂಟೈನರ್‌ಗಳಿಂದ ಈ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಅಧಿಕಾರಿಗಳು ಈ ಹಿಂದೆ ಹೇಳಿದ್ದರು.

Heroin Seized: ಮಾದಕ ವಸ್ತು ಕಳ್ಳಸಾಗಣೆಗೆ ಭಾರತವೇ ಹೆದ್ದಾರಿ: ಹೆರಾಯಿನ್‌ ಜಪ್ತಿ 4 ವರ್ಷದಲ್ಲಿ ಶೇ.37000 ಏರಿಕೆ!

ವಿಶ್ವದಲ್ಲೇ ಅತಿ ಹೆಚ್ಚು ಮಾದಕ (Drug) ವಸ್ತು ಬೆಳೆಯುವ ದೇಶವಾದ ಅಫ್ಘಾನಿಸ್ತಾನವನ್ನು (Afghanistan) ನೆರೆಯಲ್ಲೇ ಹೊಂದಿರುವ ಭಾರತ, ಇತ್ತೀಚಿನ ವರ್ಷಗಳಲ್ಲಿ ಮಾದಕ ವಸ್ತು ಕಳ್ಳಸಾಗಣೆದಾರರ ಪ್ರಮುಖ ಸಾಗಣೆ ಕೇಂದ್ರವಾಗಿ ಹೊರಹೊಮ್ಮಿದೆ. ಕಳೆದ 4 ವರ್ಷಗಳಲ್ಲಿ ಹೆರಾಯಿನ್‌ ಜಪ್ತಿ ಪ್ರಮಾಣದಲ್ಲಿ ಶೇ.37ರಷ್ಟು ಹೆಚ್ಚಳವಾಗಿರುವುದೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದು ಅಧಿಕಾರಿಗಳು ಹೇಳಿದ್ದಾರೆ. 2018ರಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ( DRI) ಮತ್ತು ಮಾದಕ ವಸ್ತು ನಿಯಂತ್ರಣ ಮಂಡಳಿ (NCB) ಅಧಿಕಾರಿಗಳು 7.98 ಕೆಜಿ ಹೆರಾಯಿನ್‌ ವಶಪಡಿಸಿಕೊಂಡಿದ್ದರು. 2019ರಲ್ಲಿ ಜಪ್ತಿ ಪ್ರಮಾಣ ಶೇ.25ರಷ್ಟುಹೆಚ್ಚಳದ ಮೂಲಕ 9.16 ಕೆಜಿಗೆ ತಲುಪಿತು.

Latest Videos
Follow Us:
Download App:
  • android
  • ios