Mangaluru: ರಸ್ತೆ ದಾಟುವಾಗ ತಾಯಿಯ ಮೇಲೆ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಮಗಳು!

ಮಂಗಳೂರಿನ ಕನ್ನಿಗೋಳಿಯಲ್ಲಿ ರಸ್ತೆ ಅಪಘಾತವಾಗಿದ್ದು, ರಸ್ತೆ ದಾಟುತ್ತಿದ್ದ ಮಹಿಳೆಯ ಮೇಲೆ ಆಟೋ ರಿಕ್ಷಾ ಬಿದ್ದಿದೆ. ಈ ಹಂತದಲ್ಲಿ ರಸ್ತೆಯ ಈ ಬದಿಯಲ್ಲಿದ್ದ ಆಕೆಯ ಪುತ್ರಿ ಆಟೋ ರಿಕ್ಷಾವನ್ನೇ ಎತ್ತಿ ಅಮ್ಮನನ್ನು ಕಾಪಾಡಿದ್ದಾಳೆ.

First Published Sep 7, 2024, 4:48 PM IST | Last Updated Sep 7, 2024, 4:48 PM IST

ಮಂಗಳೂರು (ಸೆ.7): ರಸ್ತೆ ದಾಟುತ್ತಿದ್ದ ಮಹಿಳೆಗೆ ರಭಸವಾಗಿ ಬಂದ ಆಟೋ ಡಿಕ್ಕಿಯಾಗಿದೆ. ಕಿನ್ನಿಗೋಳಿಯ ರಾಮನಗರದಲ್ಲಿ ಈ ಘಟನೆ ನಡೆದಿದೆ. ಏಕಾಏಕಿ ಮಹಿಳೆ ರಸ್ತೆ ದಾಟಲು ಮುಂದಾದ ವೇಳೆ ದುರ್ಘಟನೆ ನಡೆದಿದೆ. ರಾಜರತ್ನಪುರ ನಿವಾಸಿ ಚೇತನಾ ಎನ್ನುವ ಮಹಿಳೆಗೆ ತೀವ್ರಗಾಯವಾಗಿದೆ. ನಿಯಂತ್ರಣ ತಪ್ಪಿ ಮಗಳ ಮುಂದೆಯೇ ತಾಯಿಗೆ ಆಟೋ ಡಿಕ್ಕಿಯಾಗಿದೆ. ಅಮ್ಮನ ಮೇಲೆ ಆಟೋ ಬಿದ್ದಿದ್ದನ್ನು ನೋಡಿದ ಮಗಳು, ಏಕಾಂಗಿಯಾಗಿ ಆಟೋರಿಕ್ಷಾವನ್ನು ಮೇಲಕ್ಕೆ ಎತ್ತಿ ತಾಯಿಯನ್ನು ಕಾಪಾಡಿದ್ದಾಳೆ.

Bengaluru: 'ರತಿಯಂತ ಹೆಂಡ್ತಿ ಇದ್ರೂ ಮತ್ತೊಬ್ಬಳ ಆಸೆಗೆ ಬಿದ್ದ..' ಗಂಡನ ಕಾಟಕ್ಕೆ ಬೇಸತ್ತು ಜೀವನಕ್ಕೆ ಗುಡ್‌ಬೈ ಎಂದ ಪತ್ನಿ!

Bengaluru: 'ಸಂಬಂಧ ಅಂದ್ಕೊಂಡು ಹೆಣ್ಣು ಕೊಟ್ವಿ, ಹೆಣ್ಣು ಹೆತ್ತವರ ಸಂಕಟ ಅವನನ್ನ ಸುಮ್ನೆ ಬಿಡಲ್ಲ..' ಮೃತ ಅನುಶಾ ತಾಯಿ ರೋದನ!