Asianet Suvarna News Asianet Suvarna News

Bengaluru: 'ರತಿಯಂತ ಹೆಂಡ್ತಿ ಇದ್ರೂ ಮತ್ತೊಬ್ಬಳ ಆಸೆಗೆ ಬಿದ್ದ..' ಗಂಡನ ಕಾಟಕ್ಕೆ ಬೇಸತ್ತು ಜೀವನಕ್ಕೆ ಗುಡ್‌ಬೈ ಎಂದ ಪತ್ನಿ!

ಬೆಂಗಳೂರಿನಲ್ಲಿ ಪತಿಯ ಕಿರುಕುಳ ತಾಳಲಾರದೆ ಪತ್ನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಶ್ಲೀಲ ವಿಡಿಯೋಗಳನ್ನು ತೋರಿಸಿ ಮತ್ತು ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಪತಿ, ವಿಚ್ಛೇದನ ನೀಡುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

Bengaluru Hulimavu husband torchered wife commits Self Death by pouring petrol san
Author
First Published Sep 7, 2024, 1:52 PM IST | Last Updated Sep 7, 2024, 4:39 PM IST

ಬೆಂಗಳೂರು (ಸೆ.7): ರತಿಯಂಥ ಹೆಂಡ್ತಿ ಪಕ್ಕದಲ್ಲಿದ್ದರೂ, ಡಿವೋರ್ಸ್‌ಗಾಗಿ ಗಂಡ ಪ್ರತಿದಿನ ಕಾಟ ಕೊಡ್ತಿದ್ದ. ನಿತ್ಯ ಅಶ್ಲೀಲ ವೀಡಿಯೋ ತೋರಿಸಿ ಕಿರುಕುಳ ನೀಡುತ್ತಿದ್ದ. ಹೆಂಡತಿಯ ಎದುರಲ್ಲೇ ಇನ್ನೊಂದು ಹುಡುಗಿಯ ಜೊತೆ ಸಲುಗೆಯಿಂದ ಇರೋದಲ್ಲದೆ, ಬೇರೆ ಹೆಂಗಸರ ಜೊತೆ ಇದ್ದಿದ್ದನ್ನು ವಿಡಿಯೋ ಕಾಲ್‌ ಮಾಡಿಯೂ ತೋರಿಸ್ತಿದ್ದ. ಕೊನೆಗೆ ಗಂಡನ ವಿಪರೀತ ಟಾರ್ಚರ್‌ನಿಂದ ಬೇಸತ್ತ ಪತ್ನಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಳಿಮಾವಿನ ಅಕ್ಷಯನಗರದಲ್ಲಿ ನಡೆದಿದೆ. ಅನುಷಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 2 ದಿನಗಳ ಹಿಂದೆಯೇ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅನುಶಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಶನಿವಾರ ಚಿಕಿತ್ಸೆ ಫಲಿಸದೆ ಆಕೆ ಸಾವು ಕಂಡಿದ್ದಾರೆ.

ಅನುಶಾ ಪತಿ ಶ್ರೀಹರಿ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಸೆಕ್ಸ್‌ನಲ್ಲಿ ಹೀಗೆ ಸಹಕರಿಸು ಎಂದು ಟಾರ್ಚರ್‌ ಕೊಡುತ್ತಿದ್ದ ಎಂದೂ ಆರೋಪಿಸಲಾಗಿದೆ. ಅದಲ್ಲದೆ, ಪತ್ನಿಯ ಮುಂದಯೇ ಬೇರೆ ಹುಡುಗಿಯರ ಜೊತೆ ಆಪ್ತತೆ ಬೆಳೆಸಿಕೊಂಡಿದ್ದ. ಇದನ್ನು ಪ್ರಶ್ನೆ ಮಾಡಿದಕ್ಕೆ ಕಿರುಕುಳ ನೀಡಲು ಆರಂಭ ಮಾಡಿದ್ದ. ಅವರಿಬ್ಬರ ವಾಟ್ಸ್‌ಆಪ್‌ ಚಾಟ್‌ಗಳು ಕೂಡ ಬಹಿರಂಗವಾಗಿದೆ. ಎರಡು ತಿಂಗಳಿನಿಂದ ಡೈವೋರ್ಸ್‌ ಕೊಡುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ್ತು ಅನುಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2019 ಏಪ್ರಿಲ್‌ 22 ಮದುವೆಯಾಗಿದ್ದ ಈ ಜೋಡಿಗೆ 2 ವರ್ಷ ಚಾರ್ವಿಕ್‌ ಹೆಸರಿನ ಗಂಡು ಮಗುವಿದೆ. ಈ ವರ್ಷದ ಮಾರ್ಚ್‌ನಿಂದ ಗಂಡ ಹೆಂಡತಿ ಗಲಾಟೆ ಹೆಚ್ಚಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆ ಅನುಷಾ ತಾಯಿ ರೇಣುಕಾ ಮಾತನಾಡಿದ್ದು,  ಮೂರ್ನಾಲ್ಕು ತಿಂಗಳಿಂದ ನನ್ನ ಮಗಳಿಗೆ ಟಾರ್ಚರ್ ಕೊಡ್ತಿದ್ದ. ಎಷ್ಟೇ ಇದ್ರೂ ನಾವು ಸರಿ ಮಾಡಿಕೊಂಡು ಹೋಗ್ತಾ ಇದ್ವಿ. ಕಂಪ್ಲೆಂಟ್ ಕೊಡೋಕು ಹೋಗೋಣ ಅಂದಿದ್ವಿ. ಆದರೆ, ನನ್ನ ಮಗಳು‌ ಮರ್ಯಾದೆ ಹೋಗುತ್ತೆ ಅಂತಾ ಬೇಡ ಅಂದಿದ್ಳು. ನನ್ನ ಮಗಳಿಗೆ ತುಂಬಾ ದಿನದಿಂದ ಡಿವೋರ್ಸ್ ಕೇಳ್ತಿದ್ದ. ವಿಡಿಯೋ ಕಾಲ್ ಮಾಡಿ ಬೇರೆ ಮಹಿಳೆ ಜೊತೆ ಹೋಗ್ತೀನಿ ಅಂತಾ ಹೇಳಿ ಹೊಟ್ಟೆ ಉರಿಸ್ತಿದ್ದ. ಡಿವೋರ್ಸ್ ಕೊಡು ಬೇರೆಯವ್ರ ಜೊತೆ ಹೋಗ್ತೀನಿ ಅಂತಿದ್ದ. ಮೂರು ತಿಂಗಳ ಹಿಂದೆ ಅವ್ನನ್ನ ಕೆಲಸದಿಂದ ತೆಗೆದು ಹಾಕಿದ್ದರು' ಎಂದು ಹೇಳಿದ್ದಾರೆ.

ಆಫೀಸಲ್ಲಿ ಟೀಮ್ ಲೀಡರ್ ಆಗಿದ್ದ. ಮಿಸ್ ಬಿಹೇವ್ ಮಾಡ್ದಾ ಅಂತಾ ತೆಗೆದಿದ್ರು. ಅದಾದಮೇಲೆ ಮತ್ತೆ ಟಾರ್ಚರ್ ಮತ್ತೂ ಜಾಸ್ತಿ ಮಾಡಿದ್ದ. ಸಾಯೋದಿನ ಕೂ  ಪಕ್ಕದಲ್ಲೇ ಇದ್ದ. ಆಕೆ ಸಾಯ್ತಿದಾಳೆ ಅಂತಾ ಗೊತ್ತಿದ್ರೂ ನಮಗೆ ಹೇಳಲಿಲ್ಲ. ಎಲ್ಲರೂ ಒಂದೇ ಮನೆಯಲ್ಲೇ ಇದ್ದೆವು. ಮಾಸ್ಟರ್ ಬೆಡ್ ರೂಮ್ ನಲ್ಲಿ ಅವರು ಇದ್ದರು. ಪಕ್ಕದಲ್ಲೇ ಇದ್ದೋನು ಈತರ ಆಗ್ತಿದೆ ಅಂತಾ ನಮಗೆ ಹೇಳಿಲ್ಲ. ಅವ್ಳು ಸಾಯ್ಲಿ ಅಂತಾ ಸಾಯೋ ಟೈಮಲ್ಲಿ ಬಂದು ನಮಗೆ ಹೇಳ್ದ‌. ಹತ್ತು ನಿಮಿಷ ಮುಂಚೆ ಹೇಳಿದ್ರೆ ನಾವು ಡೋರ್ ಒಡೆದು ಮಗಳನ್ನ ಬದುಕಿಸಿಕೊಳ್ತಿದ್ವಿ. 2 ವರ್ಷದ ಮಗು ಅನಾಥವಾಗಿದೆ. ಅಮ್ಮ ಎಲ್ಲಿ ಅಂತಾ ಕೇಳುತ್ತೆ. ನಿಮ್ಮಮ್ಮ ಬರಲ್ಲ ಅಂತಾ ಹೇಗೆ ಹೇಳೋದು. ನನ್ನ ಮಗಳ ಜೀವನ ಹಾಳ್ಮಾಡಿಬಿಟ್ಟ ಎಂದು ಕಣ್ಣೀರಿಟ್ಟಿದ್ದಾರೆ.

Bengaluru: 'ಸಂಬಂಧ ಅಂದ್ಕೊಂಡು ಹೆಣ್ಣು ಕೊಟ್ವಿ, ಹೆಣ್ಣು ಹೆತ್ತವರ ಸಂಕಟ ಅವನನ್ನ ಸುಮ್ನೆ ಬಿಡಲ್ಲ..' ಮೃತ ಅನುಶಾ ತಾಯಿ ರೋದನ!

ಅನುಶಾ ತಂದೆ ಹೇಮಂತ್ ಮಾತನಾಡಿದ್ದು, ನಟ ದರ್ಶನ್ ಎರಡನೆ ಮದುವೆ ಆಗಿದ್ದಾನೆ  ಆತ ಸಂತೋಷವಾಗಿಲ್ವಾ, ನಾನು ಎರಡನೇ ಮದುವೆ ಆದ್ರೆ ತಪ್ಪೇನು ಅಂತಾನೆ ಎಂದು ಹೇಳುತ್ತಿದ್ದ ಎಂದಿದ್ದಾರೆ.

'ನಿನ್ನ ಫೋಟೋ ನೋಡಿಕೊಂಡು ಹಸ್ತಮೈಥುನ ಮಾಡಿಕೊಂಡೆ..' ಪವಿತ್ರಾ ಗೌಡಗೆ ಸಂದೇಶ ಕಳಿಸಿದ್ದ ರೇಣುಕಾಸ್ವಾಮಿ!

Latest Videos
Follow Us:
Download App:
  • android
  • ios