Asianet Suvarna News Asianet Suvarna News

ಚಲಿಸುತ್ತಿದ್ದ ಬಸ್‌ ಹಿಂದೆ ನೇತಾಡಿ ಬಾಲಕನ ಸರ್ಕಸ್: ವಿಡಿಯೋ ವೈರಲ್

ಸ್ಕೂಲ್ ಬಸ್‌ನಲ್ಲಿ ವಿದ್ಯಾರ್ಥಿಯೊಬ್ಬ ಬಸ್ಸಿನ ಹಿಂಭಾಗದಲ್ಲಿ ಕುಳಿತುಕೊಂಡು ಸರ್ಕಸ್ ಮಾಡುತ್ತಿದ್ದ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ. ಸ್ಕೂಲ್‌ ಬಸ್‌ನ ಹಿಂದೆ ನೇತಾಡುವ ಸ್ಥಿತಿಯಲ್ಲಿ ಬಾಲಕ ಕುಳಿತುಕೊಂಡ ಬಾಲಕನ ವಿಡಿಯೋ ವೈರಲ್ ಆಗಿದೆ.

ಮಂಗಳೂರು(ಫೆ.08): ಸ್ಕೂಲ್ ಬಸ್‌ನಲ್ಲಿ ವಿದ್ಯಾರ್ಥಿಯೊಬ್ಬ ಬಸ್ಸಿನ ಹಿಂಭಾಗದಲ್ಲಿ ಕುಳಿತುಕೊಂಡು ಸರ್ಕಸ್ ಮಾಡುತ್ತಿದ್ದ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ. ಸ್ಕೂಲ್‌ ಬಸ್‌ನ ಹಿಂದೆ ನೇತಾಡುವ ಸ್ಥಿತಿಯಲ್ಲಿ ಬಾಲಕ ಕುಳಿತುಕೊಂಡ ಬಾಲಕನ ವಿಡಿಯೋ ವೈರಲ್ ಆಗಿದೆ.

ಬಸ್‌ ಸ್ಟೆಸ್‌ನಲ್ಲಿ ವಿದ್ಯಾರ್ಥಿಗಳು ನೇತಾಡಿಕೊಂಡು ಹೋಗುವುದು ಸಾಮಾನ್ಯ. ಆದರೆ, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸ್ಕೂಲ್ ಬಸ್‌ನಲ್ಲಿ ವಿದ್ಯಾರ್ಥಿಯೊಬ್ಬ ಬಸ್ ಹಿಂಭಾಗದಲ್ಲಿ ಕುಳಿತಿದ್ದಾನೆ. ರಸ್ತೆಯಲ್ಲಿ ವೇಗವಾಗಿ ಚಲಿಸುವ ಬಸ್‌ನಲ್ಲಿ ಹೀಗೆ ಕುಳಿತು ತೆರಳುತ್ತಿದ್ದುದನ್ನು ಸಾರ್ವಜನಿಕರು ಗಮನಿಸಿ ವಿಡಿಯೋ ಮಾಡಿ ಹರಿಯಬಿಟ್ಟಿದ್ದಾರೆ.

ಭಯಂಕರ ಪೆಡಂಭೂತ ಬಾಲಕಿಯ ಬ್ಲಡ್‌ ಕ್ಯಾನ್ಸರ್ ಚಿಕಿತ್ಸೆಗೆ ಕೊಟ್ಟಿದ್ದು 3 ಲಕ್ಷ..!

ಆಯ ತಪ್ಪಿ ಬಸ್ಸಿನಿಂದ ಬಿದ್ದರೆ ಹಿಂಭಾಗದಲ್ಲಿ ಬರುವ ವಾಹನಗಳ ಅಡಿಗೆ ಬೀಳುವ ಸಾಧ್ಯತೆ ಇರುವುದರಿಂದ ಇದು ಅಪಾಯಕಾರಿ. ಬಾಲಕ ಈ ರೀತಿ ನೇತಾಡಿರುವುದು ಬಸ್ ಚಾಲಕನಿಗೆ ಗೊತ್ತಿದ್ದು ನಡೆದಿದೆಯೋ ಅಥವಾ ಈ ಬಗ್ಗೆ ತಿಳಿದಿರಲಿಲ್ಲವೋ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಗೊತ್ತಿಲ್ಲದೆಯೋ ಅಲ್ಲದೆ, ಬಸ್ಸಿನಲ್ಲಿ ಫುಲ್ ರಶ್ ಇದ್ದುದರಿಂದ ಹೀಗೆ ಹಿಂಭಾಗದಲ್ಲಿ ಕುಳಿತಿದ್ದಾನೆಯೇ ಗೊತ್ತಿಲ್ಲ. ಈ ವಿಡಿಯೋ ಮಾತ್ರ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು ಕಾಲೇಜಿನ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಫೆಬ್ರವರಿ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories