Asianet Suvarna News Asianet Suvarna News

ವ್ಹೀಲ್‌ಚೇರ್‌ನಲ್ಲೇ ಅಯೋಧ್ಯೆಗೆ ಹೊರಟ ಸಾಹಸಿ: ರಾಮನ ಕಾಣುವ ಕನಸು ಕೊನೆಗೂ ನನಸಾಗುತ್ತಾ ?

ಅಯೋಧ್ಯೆಯಲ್ಲಿ ರಾಮಮಂದಿರ ಕಾಣುವ ಕೋಟ್ಯಾಂತರ ಜನರ ಬಯಕೆ ಈಡೇರುತ್ತಿದೆ. ಮಂದಿರದ ಕನಸು ಕಂಡ ವ್ಯಕ್ತಿಯೊಬ್ಬರು ತನ್ನ ಬಲಹೀನತೆಯನ್ನು ಕೂಡ ಲೆಕ್ಕಿಸದೆ ವ್ಹೀಲ್ ಚೇರ್‌ನಲ್ಲೇ ಅಯೋಧ್ಯೆಯ ಕಡೆ ಹೊರಟಿದ್ದಾರೆ. 

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಕೋಟ್ಯಾಂತ ಭಕ್ತರ ಕನಸು ಈಡೇರಲಿದೆ. ಅದ್ರೆ ಇಲ್ಲೊಬ್ಬರು ತನ್ನ ಕನಸ್ಸಿಗೆ ರೆಕ್ಕೆ ಕಟ್ಟಿ ವ್ಹೀಲ್‌ಚೇರ್‌ನಲ್ಲೇ(wheelchair) ಅಯೋಧ್ಯೆಗೆ ತೆರಳಲು ಮುಂದಾಗಿದ್ದಾರೆ. ಹೌದು ಇವರ ಹೆಸರು ಮಂಜುನಾಥ. ಮೂಲತಃ ಸಿಂಧಗಿಯವರು ಊರ್ ಊರ್ ಸುತ್ತುವುದೇ ಇವರ ಹವ್ಯಾಸವಾಗಿದೆ. ಅವಘಡ ಒಂದರಲ್ಲಿ ಕಾಲಿನ ಬಲ ಕಳೆದುಕೊಂಡ್ರು ತೀರ್ಥಯಾತ್ರೆ ಮಾಡುವುದನ್ನ ಮಾತ್ರ ಬಿಟ್ಟಿಲ್ಲ. ಒಂದು ಕ್ಷಣವು ನಿಂತ ಊರಲ್ಲಿ ನಿಲ್ಲದೆ, ಊರೂರು ಅಲೆಯುತ್ತಿದ್ದಾರೆ. ಇದೀಗ ರಾಮ ಮಂದಿರ(Ram Mandir) ಉದ್ಘಾಟನೆಯ ಸುದ್ದಿ ಕೇಳಿ ಮತ್ತೆ ಉತ್ತರಪ್ರದೇಶದತ್ತ ಮುಖ ಮಾಡಿದ್ದಾರೆ. ವ್ಹೀಲ್‌ಚೇರ್‌ನಲ್ಲಿ ಕುಳಿತುಕೊಂಡು, ಕೈಯಿಂದಲೇ ಅದನ್ನು ನಿಯಂತ್ರಿಸುತ್ತಾ, ಪ್ರತಿದಿನ ಹತ್ತಾರು ಕಿಲೋಮೀಟರ್ ಅಲೆದಾಡುವುದು ಸುಲಭದ ಮಾತಲ್ಲ. ಅದು ಕೂಡ ಒಬ್ಬಂಟಿಯಾಗಿ ತೀರ್ಥಕ್ಷೇತ್ರಗಳ ಸಂದರ್ಶನ ಮಾಡುತ್ತಾ ಉಡುಪಿಗೆ ಬಂದಿದ್ದ ಮಂಜುನಾಥ್ ತನ್ನ ಆಸೆ ಹೇಳಿಕೊಂಡರು. ಅಯೋಧ್ಯೆಗೆ(Ayodhya) ಹೊರಟಿದ್ದೇನೆ, ಉದ್ಘಾಟನೆಗೆ ತಲುಪುತ್ತೇನೋ ಇಲ್ಲವೋ ಗೊತ್ತಿಲ್ಲ. ಅಂತೂ ರಾಮನ ದರ್ಶನ ಮಾಡಿನೇ ವಾಪಸ್ ಬರೋದು ಎಂದು ಹೇಳಿಕೊಂಡರು. ಮಂಜುನಾಥ್ ಈ ಮೊದಲು ಕೂಡ ಅಯೋಧ್ಯೆಗೆ ಹೋಗಿದ್ದರಂತೆ. ಕೇವಲ ಅಯೋಧ್ಯ ಮಾತ್ರವಲ್ಲ ಈಗಾಗಲೇ ಮಥುರಾ, ಹರಿದ್ವಾರ, ಕಾಶಿ, ತಿರುಪತಿ ಸೇರಿದಂತೆ ದೇಶದ ಎಲ್ಲಾ ಸುಪ್ರಸಿದ್ಧ ಕ್ಷೇತ್ರಗಳಿಗೆ ಮಂಜುನಾಥ್ ಭೇಟಿ ಕೊಟ್ಟಿದ್ದಾರೆ. ಬೈಕ್, ಸೈಕಲ್‌ಗಳಲ್ಲಿ ದೇಶ ಸಂಚಾರ ನಡೆಸ್ತಿದ್ದ ಮಂಜುನಾಥ್, ಇದೀಗ ಕಾಲಿನ ಬಲ ಕಳೆದುಕೊಂಡ ನಂತರ ವ್ಹೀಲ್‌ಚೇರ್‌ನಲ್ಲಿ ತೀರ್ಥಯಾತ್ರೆ ನಡೆಸ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಐಟಿ ದಾಳಿ..‘ಕೈ’ MP ಮನೆಯಲ್ಲಿ ಕಂತೆ ಕಂತೆ ನೋಟು..! 5 ದಿನ, 150 ಅಧಿಕಾರಿಗಳು, 40 ಹಣ ಎಣಿಸುವ ಮಷಿನ್..!