ಐಟಿ ದಾಳಿ..‘ಕೈ’ MP ಮನೆಯಲ್ಲಿ ಕಂತೆ ಕಂತೆ ನೋಟು..! 5 ದಿನ, 150 ಅಧಿಕಾರಿಗಳು, 40 ಹಣ ಎಣಿಸುವ ಮಷಿನ್..!
ಹೈದ್ರಾಬಾದ್‌ನಿಂದ ಇನ್ನೂ 20 ಅಧಿಕಾರಿಗಳನ್ನು ಕರೆಸಿದ ಐಟಿ..!
ಕಾಂಗ್ರೆಸ್ ಸಂಸದನಿಂದ ಅಂತರ ಕಾಯ್ದುಕೊಂಡ ಹೈಕಮಾಂಡ್..!
ಇನ್ನೂ ಬಾಕಿ ಇದೆ 7 ಕೊಠಡಿ, 9 ಲಾಕರ್ಗಳ ಎಣಿಕೆ ಕಾರ್ಯ..!
ಕಾಂಗ್ರೆಸ್‌ನ ಸಂಸದ ಧೀರಜ್ ಸಾಹು ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ(It Raid) ನಡೆಸಿದ್ದು, ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಕಾಂಗ್ರೆಸ್(Congress) ಪಕ್ಷದ ರಾಜ್ಯಸಭಾ ಸಂಸದ ಧೀರಜ್ ಸಾಹು(Dheeraj Sahu) ಮನೆ ಈಗ ಮಿನಿ ರಿಸರ್ವ್ ಬ್ಯಾಂಕ್ ಆಗಿದೆ. ಮನೆಯಲ್ಲಿ ಸಿಕ್ಕಿದ ಹಣವನ್ನು ಎಣಿಸೋಕೆ ದಿನಗಳೇ ಸಾಲುತ್ತಿಲ್ಲ. ಅಂದಾಜು 300 ಕೋಟಿ ರೂಪಾಯಿ ಹಣ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ. 150 ಅಧಿಕಾರಿಗಳು 40 ಮಷಿನ್‌ಗಳೊಂದಿಗೆ ಹಣವನ್ನು ಎಣಿಸುತ್ತಿದ್ದಾರೆ. ಐದು ದಿನ ಕಳೆದರೂ ಎಣಿಕೆ ಕಾರ್ಯ ಮುಗಿದಿಲ್ಲ. ಇನ್ನೂ 7 ಕೊಠಡಿ, 9 ಲಾಕರ್ಗಳ ಎಣಿಕೆ ಕಾರ್ಯ ಇದ್ದು, ಹೈದರಾಬಾದ್‌ನಿಂದ ಇನ್ನೂ 20 ಅಧಿಕಾರಿಗಳನ್ನು ಐಟಿ ಕರೆಸಿದೆ. ಸದ್ಯ ಕಾಂಗ್ರೆಸ್ ಹೈಕಮಾಂಡ್ ಸಂಸದನಿಂದ ಅಂತರವನ್ನು ಕಾಯ್ದುಕೊಂಡಿದೆ. ಇನ್ನೂ ಜಾರ್ಖಂಡ್ ಸಂಸದನ ಸಂಪತ್ತಿನ ಖಜಾನೆ ಐಟಿ ಅಧಿಕಾರಿಗಳಿಗೆ ಸವಾಲಾಗಿದೆ.
ಇದನ್ನೂ ವೀಕ್ಷಿಸಿ: ಬೆಂಗಳೂರಿನ ಫರ್ನಿಚರ್ ಎಕ್ಸ್‌ಪೋಗೆ ಭರ್ಜರಿ ರೆಸ್ಪಾನ್ಸ್: ನಿಮ್ಮ ನೆಚ್ಚಿನ ಪೀಠೋಪಕರಣಗಳ ಖರೀದಿಗೆ ಇಂದೇ ಕೊನೆ ದಿನ