ಪ್ರವಾಹದಿಂದ ಹೇಮಾವತಿ ನದಿಯಲ್ಲಿ ಕೊಚ್ಚಿಹೋದ ಯುವಕ

ರಾಜ್ಯದ ಹಲವು ಜೆಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಚಿಕ್ಕಮಗಳೂರಿನಲ್ಲಿ ಯುವಕನೊಬ್ಬ ಹೇಮಾವತಿ ನದಿಯಲ್ಲಿ ಕೊಚ್ಚಿಹೋಗಿದ್ದಾನೆ. 

First Published Aug 8, 2019, 7:16 PM IST | Last Updated Aug 8, 2019, 7:16 PM IST

ಚಿಕ್ಕಮಗಳೂರು: [ಆ.08]: ರಾಜ್ಯದ ಹಲವು ಜೆಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಚಿಕ್ಕಮಗಳೂರಿನಲ್ಲಿ ಯುವಕನೊಬ್ಬ ಹೇಮಾವತಿ ನದಿಯಲ್ಲಿ ಕೊಚ್ಚಿಹೋಗಿದ್ದಾನೆ. ತೋಟದಲ್ಲಿ ನಿಲ್ಲಿಸಿದ್ದ ಟಿಲ್ಲರ್‌ ನೋಡಿಕೊಂಡು ಬರಲು ತೆರಳಿದ್ದ ಯುವಕನೊಬ್ಬ ಹೇಮಾವತಿ ನದಿಯಲ್ಲಿ ಕೊಚ್ಚಿಹೋದ ಘಟನೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್‌ ಠಾಣೆ ವ್ಯಾಪ್ತಿಯ ಹಾಲೂರು ಗ್ರಾಮದಲ್ಲಿ ನಡೆದಿದೆ.  ಸ್ಥಳಕ್ಕೆ ಅಗ್ನಿಶಾಮಕದಳ, ಗೋಣಿಬೀಡು ಪೊಲೀಸರು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಆಗಮಿಸಿದ್ದು, ಶ್ರೀವತ್ಸನನ್ನು ಹುಡುಕುವ ಪ್ರಯತ್ನ ನಡೆಸಿದ್ದಾರೆ.